ಹಾವೇರಿ : ಇಂದು ನಮ್ಮ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷರಾದ ಎಂ. ಬಸವರಾಜ ಪಡಕೋಟೆ ಇವರ ಆದೇಶದ ಮೇರೆಗೆ ಹಾವೇರಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಆನ್ಲೈನ್ ಬೆಟ್ಟಿಂಗ್ ರಮ್ಮಿ ಆಪ್ ಹಾಗೆಯೇ ಇನ್ನು ಮುಂತಾದ ಆ್ಯಪ್ ಗಳನ್ನು ರಾಜ್ಯಾದ್ಯಂತ ನಿಷೇಧ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು..
ಇತ್ತೀಚಿನ ದಿನಮಾನಗಳಲ್ಲಿ ಯುವಕರು ಇಂತಹ ಮಾರಕ ಬೆಟ್ಟಿಂಗ್ ಆ್ಯಪ್ ಹಾಗೂ ಸೈಟ್ ಗಳ ಮುಖಾಂತರ ಜೂಜಾಟಕ್ಕಿಳಿದು ಹಣ ಕಳೆದುಕೊಂಡು ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪ್ರಕರಣಗಳು ಇತ್ತೀಚಿನ ದಿನಮಾನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದು ಅದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇಂತಹ ಮಾರಕ ಆ್ಯಪ್ ಹಾಗೂ ಸೈಟ್ ಗಳನ್ನೂ ನಿಷೇಧಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ. ಜಿಲ್ಲಾಧ್ಯಕ್ಷರಾದ ಮಾರುತಿ ಎಫ್ ಹಾಲಗಿ,ಜಿಲ್ಲಾ ಗೌರವಾಧ್ಯಕ್ಷರಾದ ಯಲ್ಲಪ್ಪ ಕೋಣನತಂಬಿಗೆ ಮತ್ತು ಜಿಲ್ಲಾ ಮಹಿಳಾ ಅಧ್ಯಕ್ಷರಾದ ಅನ್ನಪೂರ್ಣ ವಡ್ಡಟ್ಟಿ, ಹಾವೇರಿ ತಾಲೂಕ ಮಹಿಳಾ ಅಧ್ಯಕ್ಷರಾದ ವೇದಾ, ಹಾಗೂ ಕೊಡಿ ಬಸನಗೌಡ,ರೇಣುಕಾ ಬಡಿಗೇರ,ನಾಗನಗೌಡ ಗೌಡ್ರು ಹೀಗೆ ಇನ್ನು ಅನೇಕ ಸದಸ್ಯರು ಉಪಸ್ಥಿತರಿದ್ದರು.
ವರದಿ : ನಾಗರಾಜ ವನಳ್ಳಿ