ಹುಬ್ಬಳ್ಳಿ :-ಕರ್ನಾಟಕ ಚಾಲಕರ ಒಕ್ಕೂಟದಿಂದ ಕಾರು ಬಸ್ಸು ಟಿ.ಟಿ ವಾಹನಗಳಿಗೆ ಜಿ ಪಿ ಆರ್ ಎಸ್ ಬಟನ್ ಹಾಗೂ ಟ್ಯಾಕ್ಸ್ ಅಳವಡಿಸಲು ಸರ್ಕಾರದಿಂದ ಆದೇಶ ಬಂದಿರುತ್ತದೆ. ಹಾಗೂ ಇದರ ಹಣವು ಕೂಡ ಹೆಚ್ಚಿಗೆ ಪ್ರಮಾಣದಲ್ಲಿ ಇದ್ದು ಇದನ್ನು ಅಳವಡಿಸಲು ಮಾಲಕರು ಹಾಗೂ ಚಾಲಕರು ಹರ ಸಾಹಸ ಪಡುವಂತಾಗಿದೆ ಏಕೆಂದರೆ ಗ್ಯಾರಂಟಿ ಯೋಜನೆಗಳು ಅನುಷ್ಠಾನದಲ್ಲಿ ಇರುವ ಕಾರಣ ಬಾಡಿಗೆಗೆ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ನಮ್ಮ ವಾಹನಗಳಿಗೆ ಬರುತ್ತಿಲ್ಲ ಕಾರಣ ಸರ್ಕಾರವು ಇದನ್ನು ಉಚಿತವಾಗಿ ನೀಡಿ ಮೂರು ತಿಂಗಳು ಹಳದಿ ಬೋರ್ಡ್ ವಾಹನಗಳಿಗೆ ಮೂರು ತಿಂಗಳು ಟ್ಯಾಕ್ಸ್ ಗಳನ್ನು ಕಡಿಮೆ ಮಾಡಬೇಕು. ಇಲ್ಲದೆ ಹೋದರೆ ಎಲ್ಲಾ ಚಾಲಕ ಮಾಲಕರು ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ತಿಳಿಸುವ ಮೂಲಕ ಹುಬ್ಬಳ್ಳಿಯಲ್ಲಿ ಮೆರವಣಿಗೆ ಮೂಲಕ ಹುಬ್ಬಳ್ಳಿಯ ಆರ್ ಟಿ ಓ ಮುಖ್ಯ ಅಧಿಕಾರಿಗಳ ಮೂಲಕ ಧಾರವಾಡ ಜಿಲ್ಲಾಧಿಕಾರಿಗಳಿಗೆ ಹಾಗೂ ಸಾರಿಗೆ ಸಚಿವರಾದ ಶ್ರೀರಾಮಲಿಂಗ ರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.
ವರದಿ :-ನಿತೀಶಗೌಡ ತಡಸ ಪಾಟೀಲ್