Ad imageAd image

ಹೆಚ್ಚಿನ ಬೆಲೆಗೆ ಬೀಜ ಮಾರಾಟ: ಹಸಿರು ಸೇನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

Bharath Vaibhav
ಹೆಚ್ಚಿನ ಬೆಲೆಗೆ ಬೀಜ ಮಾರಾಟ: ಹಸಿರು ಸೇನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ
WhatsApp Group Join Now
Telegram Group Join Now

ರಾಯಚೂರು : ಜಿಲ್ಲೆಯ ರಸ ಗೊಬ್ಬರ ಮತ್ತು ಕ್ರಿಮಿನಾಶಕ ಅಂಗಡಿಗಳಲ್ಲಿ ಹತ್ತಿ ಬೀಜ 850 ಎಂ ಆರ್ ಪಿ ದರ ಇರುವ ಬೀಜವನ್ನು 1500 ರಿಂದ 2,000 ದವರೆಗೆ ಮಾರಾಟ ಮಾಡಿ ರೈತರಿಗೆ ವಂಚನೆ ಮಾಡುತ್ತಿರುವ ಬಗ್ಗೆ ಇಂದು ರಾಯಚೂರು ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.

ಇದೀಗ ರಾಯಚೂರು ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭವಾಗುತ್ತಿದ್ದು ರಾಯಚೂರಿನಲ್ಲಿರುವ ರಸಗೊಬ್ಬರ ಅಂಗಡಿಗಳಿಗೆ ಹತ್ತಿ ಬೀಜ ಮಾರುಕಟ್ಟೆಗೆ ಬಂದಿದ್ದು ರೈತರು ಕೆಲ ಬೀಜಗಳನ್ನು
ಯು ಎಸ್ ಅಗ್ರಿ.ರೇವಂತ್. ಮತ್ತು ಸಂಕೇತ್.ಎನ್ನುವ ಈ ಬೀಜಗಳನ್ನು ಕೇಳಲು ಹೋದರೆ ಎಂಆರ್‌ಪಿ ದರಕ್ಕೆ ನೀಡದೆ 1500 ರಿಂದ 2000 ವರೆಗೆ ಮಾರಾಟ ಮಾಡುತ್ತಿದ್ದು ರೈತರು ಈ ಬೀಜಗಳಿಗೆ ಹೆಚ್ಚಿನ ಹಣ ನೀಡಿದವರಿಗೆ ಮಾತ್ರ ಹತ್ತಿ ಬೀಜವನ್ನು ನೀಡುತ್ತಿದ್ದು ಬಿಲ್ ನಲ್ಲಿ ಎಂ ಆರ್ ಪಿ ದರವನ್ನು ಮಾತ್ರ ಬರೆಯುತ್ತಿದ್ದು ಹೆಚ್ಚಿನ ಹಣವನ್ನು ಮೌಖಿಕವಾಗಿ ತೆಗೆದುಕೊಳ್ಳುತ್ತಿದ್ದು ತಾವು ನೀಡಿರುವ ಹಣಕ್ಕೆ ಬಿಲ್ಲನ್ನು ಕೇಳಿದರೆ ಹತ್ತಿ ಬೀಜ ಇಲ್ಲವೆಂದು ಬೆದರಿಸಿ ಕಳುಹಿಸುತ್ತಿದ್ದಾರೆ ಎಂದು ಮಾರುಕಟ್ಟೆಯಲ್ಲಿ ಇಂಥ ಅಹಿತಕರ ಘಟನೆ ನಡೆಯುತ್ತಿವೆ ಮತ್ತು ರಸಗೊಬ್ಬರ ಕೇಳಲು ಹೋದರೆ ಗೊಬ್ಬರಕ್ಕೆ ಸಂಬಂಧಪಟ್ಟಂತೆ ಲಿಂಕು ಇನ್ನೊಂದು ತೆಗೆದುಕೊಂಡರೆ ಮಾತ್ರ ರಸಗೊಬ್ಬರ ಕೊಡುತ್ತೇವೆ ಎಂದು ಮಾರಾಟಗಾರರು ಹೇಳುತ್ತಾರೆ ಮತ್ತು ಮಾರುಕಟ್ಟೆಯಲ್ಲಿ ಸುಡೋ ಬಯೋ ಹೆಸರಿನಲ್ಲಿ ನಕಲಿ ಕ್ರಿಮಿನಾಶಕ ಮಾರಾಟ ಮಾಡಿ ರೈತರಿಗೆ ಅತಿ ವಂಚನೆ ಮಾಡುತ್ತಿದ್ದು ಕೃಷಿ ಉತ್ಪನ್ನ ಮಾರುಕಟ್ಟೆ ಸೊಸೆಟಿಯಲ್ಲಿ ರಸ ಗೊಬ್ಬರ ಕೇಳಲು ಹೋದರೆ ಐದರಿಂದ 10 ಅಥವಾ 15 ಚೀಲ ಮಾತ್ರ ರೈತರಿಗೆ ನೀಡುತ್ತಿದ್ದು ಉಳಿದ ರಸ ಗೊಬ್ಬರವನ್ನು ಜಿಲ್ಲೆಯಲ್ಲಿ ಕೆಲ ರಸ ಗೊಬ್ಬರ ಮಾರಾಟ ಅಂಗಡಿಗಳಿಗೆ ರಾತೋರಾತ್ರಿ ಮಾರಾಟ ಮಾಡುತ್ತಿದ್ದು ಹೀಗಾಗಿ ರೈತರು ತೊಂದರೆಯನ್ನು ಅನುಭವಿಸುತ್ತಿದ್ದು ರೈತರಿಗೆ ಇಂತಹ ಅನ್ಯಾಯವಾಗದಂತೆ ಮುಂಜಾಗ್ರತ ಕ್ರಮವಾಗಿ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಅಧಿಕಾರಿಗಳನ್ನು ಎಚ್ಚರಿಸಲು ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ರೈತ ಸಂಘ ಜಿಲ್ಲಾಧ್ಯಕ್ಷ ಶಿವಪುತ್ರಪ್ಪ ಗೌಡ. ವೀರನಗೌಡ ಗಾರಲ ದಿನ್ನಿ. ಉಮಾದೇವಿ ನಾಯಕ್. ನಿರುಪಾದಿ. ಅಂಜನಯ್ಯ. ಉಪಸ್ಥಿತರಿದ್ದರು.
ವರದಿ:  ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
Share This Article
error: Content is protected !!