ಐಗಳಿ:– ಶ್ರಾವಣ ಮಾಸದ ನಿಮಿತ್ಯ ಅಥಣಿ ತಾಲೂಕಿನ ಐಗಳಿ ಗ್ರಾಮದ ಸಿಂಧೂರ ವಸತಿ ಶ್ರೀ ಅಪ್ಪಯ್ಯ ಸ್ವಾಮಿ ಪಲ್ಲಕ್ಕಿಯು ಕಾಲನ್ನಡೆಗೆ ಮೂಲಕ ರವಿವಾರರಂದು ಮುಂಜಾನೆ ನೂರಾರೂ ಭಕ್ತರೊಂದಿಗೆ ಜಮಖಂಡಿ ತಾಲೂಕಿನ ತುಬಚಿ ಗ್ರಾಮಕ್ಕೆ ತೆರಳಿದರು. ಕೃಷ್ಣಾ ನದಿ ಸ್ನಾನಕ್ಕೆ ಹೋಗುವಾಗ ಗ್ರಾಮದ ಭಕ್ತರಾದ ಸದಾಶಿವ ಬಿಜ್ಜರಗಿ ತಮ್ಮಣ್ಣ ವಾಘಮೋರೆ ಅಪ್ಪಸಾಬ ಮಾಳಿ ಅವರು ಭಕ್ತರಿಗೆ ಚಹಾ ಪಳಾರ ನೀಡಿದರು.
ತುಬಚಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಮಠದಲ್ಲಿ ಒಂದು ದಿನ ವಾಸ್ತವ್ಯ ಇದ್ದು ಮಂಗಳವಾರ ಐಗಳಿ ಗ್ರಾಮಕ್ಕೆ ಆಗಮಿಸಿದರು ಸಂಜೆ ಜಗದೇಶ ತೆಲಸಂಗ ಅವರು ದೇವರನ್ನು ಭರಮಾಡಿಕೊಂಡು ಭಕ್ತರಿಗೆ ಚಹಾ ಪಳಾರ ನೀಡಿ ಭಕ್ತಿ ಮರೆದರು. ದೇವರ ಜೊತೆ ಕಾಲ್ನಡೆಯಲ್ಲಿ ಸದಾಶಿವ ಸಿ ಸಿಂಧೂರ ಚನ್ನಪ್ಪ ಸಿಂಧೂರ ನಾಗಪ್ಪ ಶಿಂಧೂರ ಮುದಕಪ್ಪ ಮಾಳಿ ಧತ್ತು ಕಾಳೆ ಕುಮಾರ ವಾಘಮೊರೆ ಅರ್ಚಕರಾದ ಸಾದಶಿವ ಸಿಂಧೂರ ಪ್ರಶಾಂತ ಸಿಂಧೂರ ಮುತ್ತು ಅಗಸರ ಸೇರಿದಂತೆ ಇತರರು ಇದ್ದರು ಹಿರಿಯ ಪತ್ರಕರ್ತ ಮಲಗೌಡ ಪಾಟೀಲ. ಕೆ ಎಸ್ ಬಿರಾದಾರ ಅಪ್ಪಸಾಬ ಮದಬಾವಿ ಮುರಗೇಶ ಸ್ವಾಮಿಗಳು ದೇವರನ್ನು ದೇವಸ್ಥಾನದಲ್ಲಿ ಭರಮಾಡಿಕೊಂಡರು.
ವರದಿ:-ಆಕಾಶ ಮಾದರ