ಆಪಲ್ ಐ ಫೋನ್ 17 ಸಿರೀಸ್ ನೂತನ ಸ್ಮಾರ್ಟ್ ಫೋನ್ ಗಳು ಭಾರತದಲ್ಲಿ ಮಾರುಕಟ್ಟೆಗೆ ಬರುತ್ತಿದ್ದಂತೆ ಹೊಸ ಫೋನ್ ಖರೀದಿಸಲು ದೆಹಲಿ ಹಾಗೂ ಮುಂಬೈಯಲ್ಲಿ ಜನಜಂಗುಳಿಯೇ ಏರ್ಪಟ್ಟಿದೆ.

ಬೆಳಿಗ್ಗೆ 3 ಗಂಟೆಯಿಂದ ದೆಹಲಿ ಹಾಗೂ ಮುಂಬೈನ ಆಪಲ್ ಸ್ಟೋರ್ ಗಳ ಮುಂದೆ ಸರದಿ ಸಾಲಿನಲ್ಲಿ ನಿಂತ ಜನರು ತಮ್ಮ ನೆಚ್ಚಿನ ಹೊಸ ಫೋನ್ ಖರೀದಿಸಲು ಮುಗಿಬಿದ್ದಿದ್ದಾರೆ. ಈ ಫೋನ್ ಗಾಗಿ ನಾನು 6 ತಿಂಗಳಿನಿಂದ ಕಾಯುತ್ತಿದ್ದೇ. ನಾನು ವರ್ಷದಿಂದ ಕಾಯುತ್ತಿದ್ದೇ ಎಂದು ಸರದಿ ಸಾಲಿನಲ್ಲಿ ಯುವಕರು ಪ್ರತಿಕ್ರಿಯೆ ನೀಡಿದ್ದಾರೆ. ಹೊಸ ಫೋನ್ ಖರೀದಿಗಾಗಿ ಸರದಿ ಸಾಲಿನಲ್ಲಿ ನಿಂತ ಜನರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.




