ಬೆಂಗಳೂರು: ರಾಜ್ಯದ ಕೃಷಿ ಇಲಾಖೆಯಲ್ಲಿ ಖಾಲಿ ಇರುವಂತ ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ಅಧಿಕಾರಿಗಳ 945 ಹುದ್ದೆಗೆ ಕೆಪಿಎಸ್ಸಿಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ.
ಈ ಸಂಬಂಧ ಕರ್ನಾಟಕ ಲೋಕಸೇಲಾ ಆಯೋಗದಿಂದ ಅಧಿಸೂಚನೆ ಹೊರಡಿಸಲಾಗಿದೆ.ಹೈದರಾಬಾದ್ ಕರ್ನಾಟಕ ವೃಂದದಲ್ಲಿ ಖಾಲಿ ಇರುವಂತ ಗ್ರೂಪ್-ಬಿ ವೃಂದದ ಹಾಗೂ ಉಳಿಕೆ ಮೂಲ ವೃಂದದಲ್ಲಿನ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿರುವುದಾಗಿ ತಿಳಿಸಿದೆ.
ಹುದ್ದೆಗಳ ವಿವರ
ಹುದ್ರಾಬಾದ್ ಕರ್ನಾಟಕ ವೃಂದದ ಹುದ್ದೆಗಳ ವಿವರ
ಕೃಷಿ ಅಧಿಕಾರಿಗಳು – 42 ಹುದ್ದೆ
ಸಹಾಯ ಕೃಷಿ ಅಧಿಕಾರಿಗಳು – 231 ಹುದ್ದೆ
ಉಳಿಕೆ ಮೂಲ ವೃಂದದ ಹುದ್ದೆಗಳ ವಿವರ
ಕೃಷಿ ಅಧಿಕಾರಿಗಳು – 86 ಹುದ್ದೆಗಳು
ಸಹಾಯ ಕೃಷಿ ಅಧಿಕಾರಿಗಳು – 586 ಹುದ್ದೆ
ಅರ್ಜಿ ಸಲ್ಲಿಕೆಯು ದಿನಾಂಕ 07-10-2024ರಿಂದ ಆರಂಭಗೊಳ್ಳಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07-11-2024 ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ www.kpsc.kar.nic ಗೆ ಭೇಟಿ ನೀಡಿ ಪಡೆಯಬಹುದಾಗಿದೆ.