ತುರುವೇಕೆರೆ: ತಾಲ್ಲೂಕು ತೋಟಗಾರಿಕೆ ಇಲಾಖೆಯಿಂದ 2025-26 ನೇ ಸಾಲಿಗೆ ಅನುಷ್ಠಾನಗೊಳಿಸಲಾಗುತ್ತಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸೌಲಭ್ಯ ಕಲ್ಪಿಸಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತಾಲ್ಲೂಕು ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಡಾ.ಸುರೇಶ್ ಎಚ್ ತಿಳಿಸಿದ್ದಾರೆ.
ಯೋಜನೆಯಡಿ ತೆಂಗು, ಮಾವು, ಸಫೋಟ, ಬಾಳೆ, ಪಪ್ಪಾಯ, ಸೀಬೆ, ನೇರಳೆ, ನಿಂಬೆ, ಹಲಸು, ಕಾಳು ಮೆಣಸು, ಜಾಯಿಕಾಯಿ, ಏಲಕ್ಕಿ, ಹುಣಸೆ, ಗೇರು, ಕೋಕೋ, ಗುಲಾಬಿ, ಫ್ಯಾಶನ್ ಹಣ್ಣು, ನಕ್ಷತ್ರ ಹಣ್ಣು, ಬೆಣ್ಣೆ ಹಣ್ಣು, ರಾಮ್ ಫಲ, ಸೀತಾಫಲ, ಅಮಟೆಕಾಯಿ, ಪನ್ನೇರಳೆ, ಬೇಲದ ಹಣ್ಣು ಹಾಗೂ ಅಡಿಕೆ ಹೊರತುಪಡಿಸಿ ಇತರೆ ಎಲ್ಲಾ ತೋಟಗಾರಿಕೆ ಬೆಳೆಗಳನ್ನು ರೈತರ ಜಮೀನಿನಲ್ಲಿ ಪ್ರದೇಶ ವಿಸ್ತರಣೆ ಕೈಗೊಳ್ಳಬಹುದಾಗಿದೆ.
ಆಸಕ್ತ ರೈತರು ಕಸಬಾ ಮತ್ತು ದಂಡಿನಶಿವರ ಹೋಬಳಿ ಕೇಂದ್ರದ ಅಧಿಕಾರಿ ಜಯಕೀರ್ತಿ ಕೆ.ಆರ್ 9480158831, ಮಾಯಸಂದ್ರ ಹೋಬಳಿ ಕೇಂದ್ರದ ಅಧಿಕಾರಿ ಗೋಪಾಲ 9964941890, ದಬ್ಬೇಘಟ್ಟ ಹೋಬಳಿ ಕೇಂದ್ರದ ಅಧಿಕಾರಿ ಮಧುಚಂದ್ರ ಎಂ 8105076807 ರವರಿಗೆ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ