Ad imageAd image

ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 11,558 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ 

Bharath Vaibhav
ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 11,558 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ 
RAILWAY
WhatsApp Group Join Now
Telegram Group Join Now

ನವದೆಹಲಿ : ರೈಲ್ವೆ ನೇಮಕಾತಿ ಮಂಡಳಿ ಶೀಘ್ರದಲ್ಲೇ ನಾನ್-ಟೆಕ್ನಿಕಲ್ ಪಾಪ್ಯುಲರ್ ಕೆಟಗರಿಗಳಿಗೆ (NTPC) ಅಧಿಸೂಚನೆಯನ್ನ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದು ಬಹುನಿರೀಕ್ಷಿತ ನೇಮಕಾತಿಗಳಲ್ಲಿ ಒಂದಾಗಿದೆ.

RRB NTPCಯನ್ನ ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್ಸೈಟ್ ಮತ್ತು ಉದ್ಯೋಗ ಪತ್ರಿಕೆಯಲ್ಲಿ ಬಿಡುಗಡೆ ಮಾಡಲಾಗುವುದು.ನೋಂದಣಿಯನ್ನ RRB ಆನ್ಲೈನ್ ವೆಬ್ಸೈಟ್ನಲ್ಲಿ ಅಂದರೆ rrbapply.gov.in ನಲ್ಲಿ ಮಾಡಲಾಗುತ್ತದೆ. ದಿನಾಂಕಗಳನ್ನ ಅಧಿಕಾರಿಗಳು ಇನ್ನೂ ಘೋಷಿಸಿಲ್ಲ.

ಈ ನೇಮಕಾತಿಯ ಮೂಲಕ ಒಟ್ಟು 11,558 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ನೋಟಿಸ್ ಹರಿದಾಡುತ್ತಿದೆ. ಈ ಸೂಚನೆಯ ಪ್ರಕಾರ, CEN 05/2024ರ ಅರ್ಜಿ ಪ್ರಕ್ರಿಯೆಯು ಸೆಪ್ಟೆಂಬರ್ 14 ರಂದು ಪ್ರಾರಂಭವಾಗುತ್ತದೆ ಮತ್ತು 13 ಅಕ್ಟೋಬರ್ 2024 ರವರೆಗೆ ಮುಂದುವರಿಯುತ್ತದೆ, ಆದರೆ ಸಿಇಎನ್ 06/2024 ರ ಅರ್ಜಿ ಪ್ರಕ್ರಿಯೆಯು ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 20, 2024 ರವರೆಗೆ ಇರುತ್ತದೆ.

ಅಲ್ಲದೆ, ಪದವಿ ಹುದ್ದೆಗಳಿಗೆ ಸಿಇಎನ್ 05/2024 ಮತ್ತು ಪದವಿಪೂರ್ವ ಹುದ್ದೆಗಳಿಗೆ CEN 06/2024ರ ಅಡಿಯಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗುವುದು ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.

ಅಧಿಸೂಚನೆಯನ್ನ ಇದೇ ತಿಂಗಳು ಅಂದರೆ ಸೆಪ್ಟೆಂಬರ್ 2024 ತಿಂಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಆಕಾಂಕ್ಷಿಗಳು ಅಧಿಸೂಚನೆಯ ಮೂಲಕ ಶೈಕ್ಷಣಿಕ ಅರ್ಹತೆಗಳು, ಖಾಲಿ ಹುದ್ದೆಗಳ ಹಂಚಿಕೆ, ಅರ್ಜಿ ವಿಧಾನ ಮತ್ತು ಪರೀಕ್ಷಾ ವಿವರಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ.

ಚೀಫ್ ಕಮರ್ಷಿಯಲ್ ಕಮ್ ಟಿಕೆಟ್ ಸೂಪರ್ವೈಸರ್, ಸ್ಟೇಷನ್ ಮಾಸ್ಟರ್, ಗೂಡ್ಸ್ ಟ್ರೈನ್ ಮ್ಯಾನೇಜರ್, ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಮತ್ತು ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್, ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ ಮತ್ತು ಟ್ರೈನ್ಸ್ ಕ್ಲರ್ಕ್ ಮುಂತಾದ ಪದವಿಪೂರ್ವ ಹುದ್ದೆಗಳಿಗೆ ಒಟ್ಟು 11558 ಹುದ್ದೆಗಳನ್ನ ಭರ್ತಿ ಮಾಡುವ ನಿರೀಕ್ಷೆಯಿದೆ. ಆದರೆ, ವೆಬ್ಸೈಟ್ನಲ್ಲಿ ಯಾವುದೇ ಮಾಹಿತಿ ಇಲ್ಲ. ಇದು ಆರ್‌ಆರ್ಬಿ ಎನ್ಟಿಪಿಸಿ ನೇಮಕಾತಿ 2024 ರ ನಿರೀಕ್ಷಿತ ಖಾಲಿ ಹುದ್ದೆಗಳ ಸಂಖ್ಯೆ ಮಾತ್ರಯಿದೆ. ಖಾಲಿ ಹುದ್ದೆಗಳ ಹಂಚಿಕೆ ಈ ಕೆಳಗಿನಂತಿದೆ.

 

 

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!