ಕಲಬುರಗಿಯಲ್ಲಿರುವ ರಾಜ್ಯ ನೌಕರರ ವಿಮಾ ನಿಗಮವು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರು ಹಾಗೂ ಹಿರಿಯ ಸ್ಥಾನಿಕ ಪ್ರಾಧ್ಯಾಪಕ ಮುಂತಾದ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಸೆ. 8 ರಂದು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಖಾಲಿ ಇರುವ ಹುದ್ದೆಗಳು – ಅಧ್ಯಾಪಕರು, ಸಹಾಯಕ ಪ್ರಾಧ್ಯಾಪಕ, ಸೀನಿಯರ್ ರೆಸಿಡೆಂಟ್
ಖಾಲಿ ಹುದ್ದೆಗಳ ಸಂಖ್ಯೆ ಪ್ರಾಧ್ಯಾಪಕರು – 8 , ಅಸೋಸಿಯೇಟ್ ಪ್ರೊಫೆಸರ್ – 8, ಸಹಾಯಕ ಪ್ರಾಧ್ಯಾಪಕರು – 4 , ಸೀನಿಯರ್ ರೆಸಿಡೆಂಟ್ -45
ವಯೋಮಿತಿ : ಪ್ರಾಧ್ಯಾಪಕರು, ಅಸೋಸಿಯೇಟ್ ಪ್ರೊಫೆಸರ್ ಹಾಗೂ ಸಹಾಯಕ ಪ್ರಾಧ್ಯಾಪಕರಿಗೆ ಗರಿಷ್ಠ 69 ವರ್ಷ ಹಾಗೂ ಸೀನಿಯರ್ ರೆಸಿಡೆಂಟ್ ಹುದ್ದೆಗೆ ಗರಿಷ್ಠ 45 ವರ್ಷ
ವೇತನ ಶ್ರೇಣಿ – 1,38,108 ರೂ. ಮಾಸಿಕ – 2,41,740 ರೂ. ಮಾಸಿಕ
ಕೊನೆಯ ದಿನಾಂಕ – ಸೆ. 8 ರಂದು ಅಧಿಕೃತ ಸೂಚನೆಯಲ್ಲಿ ಉಲ್ಲೇಖಿಸಿರುವ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ.
ಹೆಚ್ಚಿನ ಮಾಹಿತಿಗೆ – https://mckalaburagi.esic.gov.in/recruitments/medical_recruitment_list ಈ ವೆಬ್ ಸೈಟ್ ಸಂಪರ್ಕಿಸಬಹುದು.




