ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಲಿಮಿಟೆಡ್ ನಲ್ಲಿ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದ್ದು, ಇದರಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆನ್ಲೈನ್ ಅರ್ಜಿ ಆರಂಭವಾಗಿದೆ.ಹೊಸದಾಗಿ ಅರ್ಜಿ ಸಲ್ಲಿಸಲು ಇಚ್ಛಿಸುವವರು ಈ ಕೆಳಗಿನಂತೆ ಆನ್ಲೈನ್ ಮುಖಾಂತರ ಬ್ಯಾಂಕಿನ ವೆಬ್ಸೈಟ್ www.sedccbank.com ಮೂಲಕ ಅರ್ಜಿ ಸಲ್ಲಿಸಬಹುದು.
ಈಗಾಗಲೇ ದಿನಾಂಕ 07-08-2023ರ ಪ್ರಕಟಣೆಯ ಮೂಲಕ ಆಹ್ವಾನಿಸಲಾಗಿರುವ ಅರ್ಜಿಗಳಲ್ಲಿ ಲಿಖಿತ ಪರೀಕ್ಷೆಗೆಅರ್ಹವಾಗಿರುವ ಅಭ್ಯರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ.
ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಅರ್ಹ/ ಅನರ್ಹರೇ ಹಾಗೂ ಯಾವ ಕಾರಣದಿಂದ ಅನರ್ಹರೆಂದು ಬ್ಯಾಂಕಿನ ವೆಬ್ಸೈಟ್ನಲ್ಲಿ ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಪರಿಶೀಲಿಸಬಹುದು. ಕೆಲವೊಂದು ಅಭ್ಯರ್ಥಿಗಳು ಈ ಕೆಳಗೆ ನಮೂದಿಸಿದ ಪೂರಕ ಮಾಹಿತಿ ಒದಗಿಸದಿರುವುದರಿಂದ ಲಿಖಿತ ಪರೀಕ್ಷೆಗೆ ಆನರ್ಹಗೊಂಡಿರುತ್ತಾರೆ.
1. ಪದವಿಯ ಅಂತಿಮ ಅಂಕಪಟ್ಟಿ ಲಭ್ಯವಿಲ್ಲದಿರುವುದು/ ಪದವಿ ಪರೀಕ್ಷೆಯ ಎಲ್ಲಾ ಸೆಮಿಸ್ಟರ್ ಅಂಕಪಟ್ಟಿ ಒದಗಿಸದಿರುವುದು
2.6 ತಿಂಗಳ ಕಂಪ್ಯೂಟರ್ ಡಿಪ್ಲೊಮಾ ಕೋರ್ಸ್ ಸರ್ಟಿಫಿಕೇಟ್ ಒದಗಿಸದಿರುವುದು
3.ಊರ್ಜಿತದಲ್ಲಿರುವ ಮೀಸಲಾತಿ ಪ್ರಮಾಣ ಪತ್ರಗಳನ್ನು ಅರ್ಜಿಯೊಂದಿಗೆ ಸಲ್ಲಿಸದೆ ಇರುವುದು.
4.ಅರ್ಜಿ ಶುಲ್ಕ ಪಾವತಿ ರಶೀದಿ ಒದಗಿಸದಿರುವುದು
5. ಮೀಸಲಾತಿ ಅಭ್ಯರ್ಥಿಗಳು ವಯೋಮಿತಿ ಸಡಿಲಿಕೆಗೆ ಪೂರಕ ದಾಖಲಾತಿ ಒದಗಿಸದಿರುವುದು.
ಈ ಮೇಲಿನ ದಾಖಲಾತಿಗಳನ್ನು ಒದಗಿಸದೇ ಲಿಖಿತ ಪರೀಕ್ಷೆಗೆ ಅನರ್ಹಗೊಂಡಿರುವ ಅಭ್ಯರ್ಥಿಗಳು ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಸಲ್ಲಿಸಲು ಪುನಃ ಅವಕಾಶ ನೀಡಲಾಗಿದೆ. ಹಿಂದೆ ಸಲ್ಲಿಸಿರುವ ಅರ್ಜಿಗೆ ಪೂರಕವಾಗಿ ಹೆಚ್ಚುವರಿ ಮಾಹಿತಿ ಸಲ್ಲಿಸಲು ಇಚ್ಛಿಸುವವರು ನೋಂದಣಿ ಸಂಖ್ಯೆಯನ್ನು ನಮೂದಿಸಿ ದಾಖಲೆಗಳನ್ನು ಪ್ರತ್ಯೇಕವಾಗಿ ಕೇಂದ್ರ ಕಛೇರಿಗೆ ದಿನಾಂಕ 18-07-2024ರ ಅಪರಾಹ್ನ 4.30ರ ಒಳಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಈಗಾಗಲೇ ಶುಲ್ಕ ಪಾವತಿಸಿದವರು ಪುನಃ ಶುಲ್ಕ ಪಾವತಿಸುವ ಅಗತ್ಯವಿಲ್ಲ ಹಾಗೂ ಅರ್ಹಗೊಂಡಿರುವ ಅಭ್ಯರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.
ವಿದ್ಯಾರ್ಹತೆ:
1. ಮಾನ್ಯತೆ ಪಡೆದ ಕರ್ನಾಟಕ ರಾಜ್ಯದ ಅಂಗೀಕೃತ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ (ಎಲ್ಲಾ ಮೂರು ವರ್ಷಗಳು ಸೇರಿ) ಕನಿಷ್ಠ 50% ಹಾಗೂ ಮೇಲ್ಪಟ್ಟು ಅಂಕ ಗಳಿಸಿರಬೇಕು.
ಮಾನ್ಯತೆ ಪಡೆದ ಕರ್ನಾಟಕ ರಾಜ್ಯದ ಅಂಗೀಕೃತ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳಿಗೆ ಪರೀಕ್ಷೆಯಲ್ಲಿ (ಎಲ್ಲಾ ಮೂರು ವರ್ಷಗಳು ಸೇರಿ) ಕನಿಷ್ಠ 45% ಹಾಗೂ ಮೇಲ್ಪಟ್ಟು ಅಂಕ ಗಳಿಸಿರಬೇಕು.
2. ಕಂಪ್ಯೂಟರ್ ಅಪರೇಶನ್ ಮತ್ತು ಅಪ್ಲಿಕೇಶನ್ ಜ್ಞಾನದೊಂದಿಗೆ ಕನಿಷ್ಟ 6 ತಿಂಗಳ ಅವಧಿಯ ಕಂಪ್ಯೂಟರ್ ಡಿಪ್ಲೋಮ ಅಥವಾ 6 ತಿಂಗಳ ಅವಧಿಯ ಯಾವುದೇ ಕಂಪ್ಯೂಟರ್ ತರಬೇತಿ ಪಡೆದ ಸರ್ಟಿಫಿಕೇಟ್ ಹೊಂದಿರಬೇಕು, ಆದರೆ ಪದವಿ ತರಗತಿಯಲ್ಲಿ ಕಂಪ್ಯೂಟರ್ ಸೈನ್ಸ್ ಪಠ್ಯ ಹೊಂದಿದವರಿಗೆ ಈ ಷರತ್ತಿನಿಂದ ವಿನಾಯಿತಿ ಇರುವುದು.