Ad imageAd image

ಹಾಲು ಒಕ್ಕೂಟದಲ್ಲಿ ಖಾಲಿರುವ 194 ಹುದ್ದೆಗಳಿಗೆ ಅರ್ಜಿ ಆಹ್ವಾನ

Bharath Vaibhav
ಹಾಲು ಒಕ್ಕೂಟದಲ್ಲಿ ಖಾಲಿರುವ 194 ಹುದ್ದೆಗಳಿಗೆ ಅರ್ಜಿ ಆಹ್ವಾನ
WhatsApp Group Join Now
Telegram Group Join Now

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗದ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶ ಒದಗಿಸಿದೆ.

ಅಧಿಕೃತ ಅಧಿಸೂಚನೆಯ ಮೂಲಕ ಸಹಾಯಕ ವ್ಯವಸ್ಥಾಪಕ ಮತ್ತು ಜೂನಿಯರ್ ಟೆಕ್ನಿಷಿಯನ್ ಸೇರಿದಂತೆ ಒಟ್ಟು 194 ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಫೆಬ್ರವರಿ 21 ರವರೆಗೆ ವಿಸ್ತರಿಸಲಾಗಿದೆ. ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ, ಪದವಿ, B.Sc, B.Com, BBA, BBM, BE/B.Tech, BVSc & AH, M.Sc, MBA ನಲ್ಲಿ ಯಾವುದಾದರೂ ಪೂರ್ಣಗೊಳಿಸಿರಬೇಕು.

ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ 35 ವರ್ಷ; 2A/2B/3A/3B ಅಭ್ಯರ್ಥಿಗಳಿಗೆ 3 ವರ್ಷ, SC/ST/ಪ್ರವರ್ಗ-I ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ದೊರೆಯಲಿದೆ.

ಅರ್ಜಿ ಶುಲ್ಕ: SC/ST/ಪ್ರವರ್ಗ-I/PWD – 500 ರೂ., ಇತರರಿಗಾಗಿ – 1000 ರೂ. ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ, ಅರ್ಹತಾ ಪಟ್ಟಿ (ಮೆರಿಟ್ ಲಿಸ್ಟ್) ಮತ್ತು ಮೌಖಿಕ ಸಂದರ್ಶನ ಮೂಲಕ ನಡೆಯಲಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!