ಅರಸೀಕೆರೆ : ನಗರದ ಪ್ರವಾಸಿ ಮಂದಿರದಲ್ಲಿ ಇಂದು ಅಖಿಲ ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗೆ ನೂತನ ಪದಾಧಿಕಾರಿಗಳ ನೇಮಕ ಮತ್ತು ರೈತರ ಸೇರ್ಪಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಭಾಗದ ರೈತರು ಹಾಸನ ಜಿಲ್ಲಾ ಅಧ್ಯಕ್ಷರಾದ ಕೋಡಿಹಳ್ಳಿ ಕುಮಾರ್ ಅವರ ಸಮ್ಮುಖದಲ್ಲಿ ರೈತರು ಸೇರ್ಪಡೆಗೊಂಡರು. ಸೇರ್ಪಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಕುಮಾರ್ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು ನಿರ್ಮೂಲನೆ ಮಾಡಲು ಸಂಘಟನೆಗಳ ಶಕ್ತಿ ಅತಿ ಮುಖ್ಯವಾದದ್ದು. ಪ್ರತಿಯೊಂದು ಕಚೇರಿಗಳಾಗಲಿ ಇತರೆ ಭಾಗಗಳಾಗಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ಅದನ್ನು ನಿರ್ಮೂಲನೆ ಮಾಡಬೇಕಾದರೆ ಸಂಘಟನೆಗಳ ಮೂಲಕ ಮಾತ್ರ ಸಾಧ್ಯವಾಗಲಿದೆ.ಒಬ್ಬ ವ್ಯಕ್ತಿಯಿಂದ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯವಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ರೈತನ ಕಷ್ಟಗಳಿಗೆ ಮತ್ತು ರೈತನ ಸಮಸ್ಯೆಗಳನ್ನು ನಿರ್ಮೂಲನೆ ಮಾಡಬೇಕಾದರೆ ಒಂದು ಸಂಘಟನೆಯಿಂದ ಮಾತ್ರ ಸಾಧ್ಯವಾಗಲಿದೆ ಎಂದು ಕುಮಾರ್ ಅವರು ಹೇಳಿದರು. ನಂತರ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ ರೈತರು ಕಷ್ಟ ಪಟ್ಟ ಬೆಳೆದ ಬೆಳೆಗಳಿಗೂ ಇತ್ತೀಚಿನ ದಿನಗಳಲ್ಲಿ ಬೆಂಬಲ ಬೆಲೆ ಸಿಗದೇ ಮಧ್ಯವರ್ತಿಗಳ ಪಾಲಾಗುತ್ತಿದೆ . ಆದ್ದರಿಂದ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಉದ್ದೇಶದಿಂದ ಹಲವು ಭಾಗದ ಯುವ ರೈತರು ಈ ದಿನ ಸಂಘಟನೆಗೆ ಶಕ್ತಿ ತುಂಬ ಉದ್ದೇಶದಿಂದ ಮತ್ತು ನಮ್ಮ ರೈತರ ಸಮಸ್ಯೆಯನ್ನು ನಿರ್ಮೂಲನೆ ಮಾಡುವ ಮೂಲಕ ಸಂಘಟನೆ ಸೇರಿ ಭ್ರಷ್ಟಾಚಾರ ತಡೆಯಬೇಕೆಂಬ ಸಂಕಲ್ಪವನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕಿನ ಹಾರನಹಳ್ಳಿ. ಸುಳೆಕೆರೆ. ಯಾದಪುರ.ಬೆಳಗುಂಬ. ಟೀ ಕೋಡಿಹಳ್ಳಿ ಹಾಗೂ ವಿವಿಧ ಭಾಗದ ನೂತನ ಪದಾಧಿಕಾರಿಗಳ ನೇಮಕ ಮತ್ತು ರೈತರ ಸೇರ್ಪಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ್ (ಅರಸೀಕೆರೆ) . ತಾಲೂಕು ಗೌರವಾಧ್ಯಕ್ಷ ಶ್ರೀಧರ್ (ಯಾದಪುರ). ತಾಲೂಕು ಪ್ರಧಾನ ಕಾರ್ಯದರ್ಶಿ ಅಶೋಕ್ (ನಾಗೇನಹಳ್ಳಿ) ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಮನೋಜ್( ಸೂಳೆಕೆರೆ) ಇವರುಗಳು ಉಪಸ್ಥಿತಿ ಇದ್ದರು.
ವರದಿ : ರಾಜು ಅರಸೀಕೆರೆ




