ಸೇಡಂ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕ ಸೇಡಂ ವತಿಯಿಂದ ದೇವನೂರು ಗ್ರಾಮ ಘಟಕ ನೂತನ ಪದಾಧಿಕಾರಿಗಳನ್ನು ತಾಲೂಕ ಅಧ್ಯಕ್ಷರಾದ ಅನಿಲ್ ಪೊಟೇಲಿ ಇವರ ನೇತೃತ್ವದಲ್ಲಿ ನೇಮಕ ಮಾಡಲಾಯಿತು.
ಅದ್ಯಕ್ಷರಾಗಿ ಸಾಯಿಲು ನಾಟೆಕರ್, ಉಪಾಧ್ಯಕ್ಷರಾಗಿ ಮುರುಗೇಂದ್ರ, ಕಾರ್ಯದರ್ಶಿಯಾಗಿ ಶಿವಲಿಂಗ, ಪ್ರಧಾನ ಕಾರ್ಯದರ್ಶಿ ಸಿದ್ದು ಕಲಾಲ್, ಖಜಾಂಚಿ ಶ್ರೀಕಾಂತ್ ಇವರನ್ನು ನೇಮಕ ಮಾಡಿ ಅನಿಲ್ ಪೊಟೇಲಿ ಆದೇಶ ಪತ್ರ ನೀಡಿ ಸಂಘದ ನಿಯಮಗಳ ಕುರಿತು ಮಾತನಾಡಿದರು.
ಇದೇ ವೇಳೆ ಸದಸ್ಯರುಗಳಾದ ನರಸಪ್ಪ, ಹನುಮಂತು,ದೇವೇಂದ್ರ, ಶರಣಯ್ಯಸ್ವಾಮಿ ಸೇರಿದಂತೆ ರೈತ ಬಾಂಧವರು ಭಾಗವಹಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




