Ad imageAd image

ಕರ್ನಾಟಕ ಭೀಮ ರಕ್ಷಕ ಸಂಘಟನೆಯ ಪದಾಧಿಕಾರಿಗಳ ನೇಮಕ..!

Bharath Vaibhav
ಕರ್ನಾಟಕ ಭೀಮ ರಕ್ಷಕ ಸಂಘಟನೆಯ ಪದಾಧಿಕಾರಿಗಳ ನೇಮಕ..!
WhatsApp Group Join Now
Telegram Group Join Now

ಬೆಳಗಾವಿ :- ಹುಕ್ಕೇರಿ ಸೇರಿದಂತೆ, ಘಟಕದ ಪದಾಧಿಕಾರಿಗಳ ನೇಮಕಕಾತಿಮಾಡಲಾಯಿತು.ಇದೇ ಸಂದರ್ಭದಲ್ಲಿ, ಕಾರ್ಯಕ್ರಮಕ್ಕೆ ಸಂವಿಧಾನ ಪೀಠಿಕೆ ಓದುವ ಮೂಲಕ ಚಾಲನೆ ನೀಡಲಾಯಿತು.

ಬೆಳಗಾವಿ ನಗರದ ಸರ್ಕಿಟ ಹೌಸನಲ್ಲಿ ಕರ್ನಾಟಕ ಭೀಮ ರಕ್ಷಕ ಸಂಘಟನೆಯ (ರಿ) ದಿನಾಂಕ: 17:09:2024 ರಂದು ಕರ್ನಾಟಕ ಭೀಮ ರಕ್ಷಕ ಸಂಘಟನೆಯ ಬೆಳಗಾವಿ ಹಾಗು ಹುಕ್ಕೇರಿ ಘಟಕದ ಪದಾಧಿಕಾರಿಗಳನ್ನು ನೇಮಕಕಾತಿ ಮಾಡಿ ಆದೇಶ ಪ್ರತಿಯನ್ನು ಕೊಡಲಾಯಿತು.

ಕರ್ನಾಟಕ ಭೀಮ ರಕ್ಷಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಈಶ್ವರ ಮಾರುತಿ ಗುಡಜ ರವರು ಸಂಘಟನೆಯ ಮೂಲ ಉದ್ದೇಶ ಅನ್ಯಾಯಕ್ಕೊಳಗಾದ ಜನರಿಗೆ ನ್ಯಾಯ ಕೊಡಿಸುವುದು, ನ್ಯಾಯನೀತಿ ಧರ್ಮವನ್ನು ಕಾಪಾಡುವುದು ಸಂಘಟನೆಯ ಮುಖ್ಯ ಉದ್ದೇಶ ಎಂದು ಪದಾಧಿಕಾರಿಗಳಿಗೆ ತಿಳಿ ಹೇಳಿದರು.

ಅನ್ಯಾಯದ ವಿರುದ್ಧ ಸಿಡಿದೆಳುವುದೇ ನಮ್ಮ ಸಂಘಟನೆಯ ಮುಖ್ಯ ಧ್ಯೇಯವಾಗಿದೆ ಎಂದು ಹೇಳಿದರು.ಸಂಘಟನೆಯ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಮಂಜುಳಾ ರಾಮಗಾಣಟ್ಟಿ ಮಾತನಾಡಿ ಯಾವುದೇ ರೀತಿಯಾದ ಭಿನ್ನಾಭಿಪ್ರಾಯಗಳಿಗೆ ಸಂಘಟನೆಯಲ್ಲಿ ಅವಕಾಶ ಇರುವುದಿಲ್ಲ ಎಂಬ ಖಡಕ್ ಸಂದೇಶ ಹೇಳಿ.

ಪದಾಧಿಕಾರಿಗಳನ್ನ ಅವರ ಎದೆಗಾರಿಕೆ ಹಾಗೂ ಸಾಮಾಜಿಕ ಕಳಕಳಿ ಹೋರಾಟದ ಮನೋಭಾವನೆ ಹೊಂದಿದವರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ.ಯಾವುದೇ ನಿರ್ದಿಷ್ಟವಾದ ಒಂದು ಸಮಾಜದ ಉದ್ದೇಶ ಇಳ್ಕೊಳ್ಳಲಾರದೆ ಎಲ್ಲಾ ಸಮಾಜವನ್ನು ಎತ್ತಿಕೊಂಡು ಹೋಗುವಂತ ಕೆಲಸವನ್ನು ಕರ್ನಾಟಕ ಭೀಮ ರಕ್ಷಕ ಸಂಘಟನೆ ಮಾಡುತ್ತದೆ.ಹಾಗು ಯಾವುದೇ ರೀತಿಯ ಉದ್ದೇಶ ಇಡ್ಕೊಂಡು ಸಂಘಟನೆ ಮಾಡುತ್ತಿಲ್ಲ.

ಆದ್ದರಿಂದ ಪ್ರತಿಯೊಬ್ಬರ ಸಂಘಟನೆಗೆ ಬನ್ನಿ ಮತ್ತು ನಿಮ್ಮವರನ್ನು ಕರೆ ತನ್ನಿ ಎಂದು ಆಹ್ವಾನ ನೀಡಿದರು.ಸಂಘಟನೆ ಸೇರಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಸುನಿತಾ ಕೋಣ್ಣೂರ ನಾವು ಹಲವಾರು ಸಂಘಟನೆಯಲ್ಲಿ ಕೆಲಸ ಮಾಡಿದ್ದೇವೆ ಆದರೆ ಇದು ಕರ್ನಾಟಕ ಭೀಮ ರಕ್ಷಕ ಸಂಘಟನೆ ಜಿಲ್ಲೆಯಲ್ಲಿ ಕೆಲಸ ಮಾಡುವುದು ನೋಡಿ ನಾನು ಈ ಸಂಘಟನೆ ಬಂದಿದ್ದೇನೆ ನಾನು ಈ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ಸಂಘಟನೆ ಬೆಳೆಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಸಂಘಟನೆ ಸೇರಿ ಗೌರವ ಅಧ್ಯಕ್ಷರಾದ ಮಾಹಾನಿಂಗ ಶಿರಗುಪ್ಪಿ ಮಾತನಾಡಿ ನಾನು ಕಳೆದ 20 ವರ್ಷ ಗಳಿಂದ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ ನಾಲ್ಕು ಬಾರಿ ಸದಸ್ಯನಾಗಿ ಜನರ ಸೇವೆ ಮಾಡಿದ್ದೇನೆ ಆದ್ದರಿಂದ ಸಂಘಟನೆ ಒಂದು ಒಳ್ಳೆಯ ರೀತಿಯಲ್ಲಿ ಬೆಳೆಯಲಿ ಯುವಕರಿಗೆ ಹೆಚ್ಚಿನ ಪ್ರೋತ್ಸಾಹ ಮಾಡೋಣ ವಿದ್ಯಾಭ್ಯಾಸಕ್ಕೆ ಬಡ ಜನರಿಗೆ ನಮ್ಮಿಂದ ಸಾದ್ಯವಾದಶ್ಟು ಸಹಾಯ ಮಾಡೋಣ ಎಂದು ಸಲಹೆ ನೀಡಿದರು ನಾವು ಸಂಘಟನೆ ಯಿಂದ ಹೆಚ್ಚಾಗಿ ಶಿಕ್ಷಣಕ್ಕೆ ಒತ್ತು ನಿಡೋನಾ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಯ್ಕೆ ಮಾಡಿದ ಎಲ್ಲಾ ಪದಾದಿಕಾರಿಗಳನ್ನು ಸರ್ವಾನು ಮತ ಗಳಿಂದ ಆಯ್ಕೆ ಮಾಡಲಾಯಿತು.
ಬೆಳಗಾವಿ ಜಿಲ್ಲೆಯ ಗೌರವ ಅಧ್ಯಕ್ಷರಾಗಿ ಮಾಹಾನಿಂಗ ಶಿರಗುಪ್ಪಿ ಅವರನ್ನು ಆಯ್ಕೆ ಮಾಡಿದರೆ, ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿಯಾಗಿ ಸುನಿತಾ ಲ.ಕೋಣ್ಣೂರ ಅವರನ್ನು ಆಯ್ಕೆ ಮಾಡಲಾಯಿತು.

ಅದೆ ರೀತಿ ಮಹಿಳಾ ಘಟಕದ ಬೆಳಗಾವಿ ಯುವ ಘಟಕದ ಅಧ್ಯಕ್ಷರಾಗಿ ಸಂಗೀತಾ ಕಾಂಬಳೆ ಅವರನ್ನು ಆಯ್ಕೆ ಮಾಡಲಾಯಿತು
ಗಿರಿಜಾ ಕೋಳಿ ಬೆಳಗಾವಿ ಗ್ರಾಮೀಣ ಅಧ್ಯಕ್ಷರಾಗಿ ಆಯ್ಕೆ ಜಯಶ್ರೀ ಮೇತ್ರೀ ಹೋನಗಾ ಗ್ರಾಮದ ಮಹಿಳಾ ಘಟಕದ ಅಧ್ಯಕ್ಷರಾಗಿ ಆಯ್ಕೆ ಮಹಿಳಾ ಘಟಕದ ಗೋಕಾಕ ತಾಲ್ಲೂಕಿನ ಅಧ್ಯಕ್ಷರಾಗಿ ಆಯ್ಕೆ ರೀಯಾಣ ಕಟ್ಟಿಮನಿ ಅಲ್ಪ ಸಂಖ್ಯಾತ ಮಹಿಳಾ ಘಟಕದ ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ.ಲಕವ್ವ ಬಾ. ಸತ್ತೇವಗೋಳ ಹುಕ್ಕೇರಿ ಮಹಿಳಾ ಘಟಕದ ಅಧ್ಯಕ್ಷರಾಗಿ ಆಯ್ಕೆ.ರೀಹಾಣ ಖಾನ ಹೋನಗಾ ಹುಕ್ಕೇರಿ ತಾಲ್ಲೂಕಿನ ಅಲ್ಪ ಸಂಖ್ಯಾತ ಘಟಕ ಅಧ್ಯಕ್ಷರಾಗಿ ಆಯ್ಕೆ.ಮೇಹಬುಬ ಎಂ.ಶೇಕ ಆಟೋ ಘಟಕದ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ.ವೀರೇಂದ್ರ ನಾಯಕ ಖಂಗ್ರಾಳಿ ಗ್ರಾಮ ಘಟಕದ ಅಧ್ಯಕ್ಷರಾಗಿ ಆಯ್ಕೆ ಹಾಗು ಉಪಾಧ್ಯಕ್ಷರಾಗಿ ಆಯ್ಕೆ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಿ ಲಾಯಿತು.ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷರಾದ ವಿನೋದ ಗಸ್ತಿ ಈಶ್ವರ ರಾಮಗಾಣಟ್ಟಿ ಹಾಗು ಹಿರಿಯರು ಇತರರು ಉಪಸೀತರಿದ್ದರು.

ವರದಿ :-ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!