ಸೇಡಂ : ತಾಲೂಕಿನ ಮೋತಕಪಲ್ಲಿ ಗ್ರಾಮದಲ್ಲಿ ದಿನಾಂಕ 26/9/2007 ರಂದು ಮೂರು ಜನ ಆರೋಪಿತರು ಮಹಾರಾಷ್ಟ್ರದಿಂದ ಕೀಟನಾಶಕಗಳನ್ನು ವಾಹನದಲ್ಲಿ ತುಂಬಿಕೊಂಡು ಬಂದು ಅನಧಿಕೃತವಾಗಿ ಮಾರಾಟ ಮಾಡುತ್ತಾ ಸಾರ್ವಜನಿಕರಿಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡುತ್ತಿರುವ ಬಗ್ಗೆ ಪಿರ್ಯಾದಿದಾರ ಜಿ. ಟಿ. ಬಾವಿ ಸಹಾಯಕ ಕೃಷಿ ನಿರ್ದೇಶಕರು ನೀಡಿದ ದೂರಿನ ಆಧಾರದ ಮೇಲೆ ದಿನಾಂಕ 26 /9/ 2007 ರಂದು ಮಹಾರಾಷ್ಟ್ರ ರಾಜ್ಯದ ಬೀಡ ಜಿಲ್ಲೆಯ ಆರೋಪಿತರಾದ 1)ಸೋಫಾನ್,2)ನಾರಾಯಣ,3) ಸಿರಿಸ್ ರವರ
ಮೇಲೆ ಮುಧೋಳ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 99/2007 ಕಲಂ 420 R/W 34 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಇಬ್ಬರು ಆರೋಪಿತರು 2) ಮತ್ತು 3) ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಲಯದ ವಿಚಾರಣೆಯನ್ನು ಎದುರಿಸಿರುತ್ತಾರೆ.
ಆದರೆ ಆರೋಪಿ ಸಂಖ್ಯೆ 1)ಸೋಪಾನ ತಂದೆ ಶೇಷರಾವ್ ತೊಂಡೆ ಈತನು ವಿಚಾರಣೆಗೆ ಹಾಜರಾಗದೆ ಪ್ರಕರಣ ದಾಖಲಾದಾಗಿನಿಂದ ತಲೆಮರಿಸಿಕೊಂಡಿದ್ದ ಆರೋಪಿಯಾದ 1)ಸೋಪಾನ ತಂದೆ ಶೇಷರಾವ್ ತೊಂಡೆ ಈತನ ಪತ್ತೆ ಕುರಿತು ಕಲಬುರಗಿ ಪೋಲಿಸ್ ಅಧೀಕ್ಷರಾದ ಅಡ್ಡೂರು ಶ್ರೀನಿವಾಸಲು ಐಪಿಎಸ್ ಹಾಗೂ ಮಹೇಶ ಮೇಘಣ್ಣ ನವರ ಅಡಿಷನಲ್ ಎಸ್ಪಿ ಹಾಗೂ ಸಂಗಮನಾಥ ಹಿರೇಮಠ ಪೋಲಿಸ್ ಉಪಾಧಿಕ್ಷರು ಚಿಂಚೋಳಿ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ದೌಲತ್ ಎನ್. ಕೆ. ಪಿ.ಐ. ಮುಧೋಳ ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಎ.ಎಸ್.ಐ ನಾಗೇಂದ್ರಕುಮಾರ ಹೆಚ್. ಸಿ., ಮಂಜುನಾಥ್ ಗಾಯಕ್ವಾಡ್ ಹೆಚ.ಸಿ, ಭೀಮಣ್ಣ, ಅಶೋಕ್ ರೆಡ್ಡಿ, ಶಂಕರಗೌಡ , ಹೆಚ.ಸಿ. ನರೇಶ್ ಹಾಗೂ ಎಚ್.ಸಿ.ಬಲರಾಮ್ ರವರು ಹಲವು ದಿನಗಳ ಕಾರ್ಯಾಚರಣೆ ನಡೆಸಿ, ಮಾಹಿತಿ ಸಂಗ್ರಹಿಸಿ, ಹಾಗೂ ತಾಂತ್ರಿಕ ಮಾಹಿತಿ ವಿಶ್ಲೇಷಿಸಿ,
ದಿನಾಂಕ 13 /11/ 2025 ರಂದು ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರ ರಾಜ್ಯದ ಲಾತೂರ ಜಿಲ್ಲೆಯ ಅಂಬೆಜೋಗಾಯಿ ತಾಲೂಕಿನ ಚೋಪನವಾಡಿ ಗ್ರಾಮದ ಆರೋಪಿ ಸೋಪಾನ ನನ್ನು ಬಂಧಿಸಿರುತ್ತಾರೆ.
ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿ ವರ್ಗದವರ ಕಾರ್ಯಾಚರಣೆಗೆ ಮಾನ್ಯ ಎಸ್. ಪಿ . ಅಡ್ಡೂರು ಶ್ರೀನಿವಾಸಲು ಅವರು ಪ್ರಶಂಸೆ ವ್ಯಕ್ತಪಡಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




