Ad imageAd image

ವಿದ್ಯಾರ್ಥಿನಿಯನ್ನು ಹಾಡುವಾಗಲೇ ಕೊಲೆ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ

Bharath Vaibhav
WhatsApp Group Join Now
Telegram Group Join Now

ಮೊಳಕಾಲ್ಮುರು:-  ಹುಬ್ಬಳ್ಳಿಯಲ್ಲಿ ಜುರಗಿದ ಕಾಲೇಜ್ ವಿದ್ಯಾರ್ಥಿನಿಯನ್ನು ಹಾಡುವಾಗಲೇ ಕೊಲೆ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಭಾರತೀಯ ಜನತಾ ಪಾರ್ಟಿಯಿಂದ ಪ್ರತಿಭಟನೆ.

ಮೊಳಕಾಲ್ಮುರು:-ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕೊಲೆ ಬದರಿಕೆ ಜೊತೆಗೆ ಭಯತ್ಪಾದಕ ಚಟುವಟಿಗಳು ಅತಿಯಾಗಿ ಹೋಗಿವೆ ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ, ಕಾಂಗ್ರೆಸ್ ಪಕ್ಷದ ಕಾರ್ಪೊರೇಟ್ ಮಗಳಿಗೆ ರಕ್ಷಣಾ ಇಲ್ಲವೆಂದರೆ ಸಾಮಾನ್ಯ ಜನಗಳ ಪಾಡೇನು ಎಂದು ಮಂಡಲ ಅಧ್ಯಕ್ಷರಾದ ಡಾ ಪಿ ಎಂ ಮಂಜುನಾಥ್ ರವರು ವಾಗ್ದಾಳಿ ನಡೆಸಿದರು.

ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಶುಕ್ರವಾರದಂದು ಪ್ರತಿಭಟನೆ ಮಾಡಿ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡದ ಸರ್ಕಾರದ ವಿರುದ್ಧ ಮತ್ತು ಗೃಹ ಮಂತ್ರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಮಾಡಿದರು.

ಹುಬ್ಬಳ್ಳಿಯಲ್ಲಿ ಕಾಲೇಜ್ ಕ್ಯಾಂಪಸ್ ನಲ್ಲಿ ಹಾಡು ಹಗಲೇ ನೇಹಾ ಹಿರೇಮಠ್ ಎಂಬ ವಿದ್ಯಾರ್ಥಿನಿಯನ್ನು ಕೊಲೆ ಮಾಡಿರುವ ಫಯಾಜ್ನನ್ನು ಬಂಧಿಸಿದ್ದಾರೆ
ಈ ಘಟನೆಯಿಂದ ಸಾರ್ವಜನಿಕ ವಲಯದಲ್ಲಿ ಸಮಾಜದಲ್ಲಿ ಭಯ ಭೀತಿಯನ್ನ ಉಂಟುಮಾಡಿದೆ.

ಇದಕ್ಕೆ ಮುಖ್ಯ ಕಾರಣ ಕಾಂಗ್ರೆಸ್ ಸರ್ಕಾರ ಕಾಂಗ್ರೆಸ್ ಸರ್ಕಾರ ಬಂದಾಗ ನಿಂದಲೂ ಇಂತಹ ಘಟನೆಗಳು ನಡೆಯುತ್ತಿವೆ ಇಂತಹ ಘಟನೆಗಳು ನಡೆದರೆ ಸಚಿವರು ಏನು ನಡೆದೇ ಇಲ್ಲ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಶ್ರೀರಾಮ ರೆಡ್ಡಿ ಮಾತನಾಡಿ ಮತಾಂತರಗೆ ರಕ್ಷಣೆ ನೀಡುತ್ತಿದೆ ಈ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ರಕ್ಷಣೆನೇ ಇಲ್ಲ ಕಳೆದ ಎರಡು ದಿನಗಳೇ ಹಿಂದ ನಡೆದ ಶ್ರೀರಾಮ ನವಮಿಯ ದಿನದಂದು ಬೆಂಗಳೂರಿನಲ್ಲಿ ಕೆಲ ಕಿಡಿಗೇಡಿಗಳು ಶ್ರೀರಾಮ ಎನ್ನುವಂತಿಲ್ಲ ಅಲ್ಲಾಹು ಅಕ್ಬರಬೇಕು ಅನ್ನಬೇಕು ಎಂಬ ಹೇಳಿಕೆಗಳನ್ನು ನೀಡಿ ಆವಚ ಶಬ್ದಗಳಿಂದ ನಿಂದಿಸಿರುವ ಘಟನೆ ನಮ್ಮ ಕಣ್ಣುಮುಂದೆ ಇದೆ ಎಂದು ವಾಗ್ದಾಳಿ ನಡೆಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ರೇವಣ್ಣ ಮಾತನಾಡಿ. ಇಂತಹ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಬೇಕು ಅಂತವರ ಮನೆಗಳಿಗೆ ನುಗ್ಗಿ ಬುಲ್ಡೋಜರ್ ನಿಂದ ಮನೆಗಳನ್ನು ದ್ವಂಸ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು,

ಅದೇ ರೀತಿ ಶ್ರೀರಾಮ ರೆಡ್ಡಿ ಕೂಡ ತಮ್ಮ ಆಕ್ರೋಶವನ್ನು ಹೊರಹಾಕಿದರು.ಈ ಸಂದರ್ಭದಲ್ಲಿ ತಹಸಿಲ್ದಾರ್ ಶಂಕ್ರಪ್ಪ ಪ್ರಭು ಸಿದ್ದಾರ್ಥ್,ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷರಾದ ಲಕ್ಷ್ಮಣ್, ಮಾಜಿ ಉಪಾಧ್ಯಕ್ಷರಾದ ಎಂ ಎನ್ ಮಂಜಣ್ಣ, ಸದಸ್ಯರುಗಳಾದ ತಿಪ್ಪೇಸ್ವಾಮಿ,ಶುಭ ಪೃಥ್ವಿರಾಜ್, ಸರ್ವ ಮಂಗಳ, ಭೀಮಣ್ಣ ಮತ್ತು ವನಿತಾ, ಬಿಜೆಪಿ ಮುಖಂಡರಾದ ಶ್ರೀನಿವಾಸ್, ಕಿರಣ್ ಗಾಯಕ್ವಾಡ್ ಇನ್ನು ಹಲವರು ಉಪಸ್ಥಿತರಿದ್ದರು.

ವರದಿ ಪಿಎಂ ಗಂಗಾಧರ

WhatsApp Group Join Now
Telegram Group Join Now
Share This Article
error: Content is protected !!