ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಏಪ್ರಿಲ್ 29 ರಂದು ಜಿಲ್ಲಾ ಬಸವ ಜಯಂತಿ ಸಮಿತಿ ವತಿಯಿಂದ ಬಸವ ಜಯಂತಿ ಹಮ್ಮಿಕೊಂಡಿದ್ದಾರೆ ಈ ಜಯಂತಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಮಾಡುತ್ತಿದ್ದಾರೆ ಎಂದು ಬಿಂಬುಸುತ್ತಿದ್ದಾರೆ ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷರಾದ ಸಂಜೀವಕುಮಾರ್ ಪಾಟೀಲ್ ಆರೋಪಿಸಿದ್ದರು.
ಪೋಲಕಪಳ್ಳಿಯ ಹೊರವಲಯದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಚಿಂಚೋಳಿಯಲ್ಲಿ ಇಂದು ಜಿಲ್ಲಾ ಬಸವ ಜಯಂತಿಯ ಉತ್ಸವ ಸಮಿತಿಯ ಅಧ್ಯಕ್ಷರಾದ ಎಂ ವೈ ಪಾಟೀಲ,ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ತಾಲೂಕು ಲಿಂಗಾಯತ ಸಮಾಜದ ತಾಲೂಕು ಪದಾಧಿಕಾರಿಗಳಿಗೆ ಹಾಗೂ ಇನ್ನು ಉಳಿದ ಬಸವ ಪರ ಸಂಘಟನೆಗಳಿಗೆ ಜಿಲ್ಲಾ ಬಸವ ಜಯಂತಿಯ ಅಧ್ಯಕ್ಷರು ಸಭೆ ಇದೆ ಎಂದು ಹೇಳಿಲ್ಲ ಸಭೆ ಬ್ಯಾನರ್ ನೋಡಿದ್ದಾರೆ.
ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷರು ಫೋಟೋ ಮತ್ತು ಚಿಂಚೋಳಿ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರ ಫೋಟೋ ಹಾಕಿಕೊಂಡು ಸಭೆಯನ್ನು ಮಾಡಿದ್ದಾರೆ ಇದಕ್ಕೆ ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ತಾಲೂಕು ಘಟಕ ವತಿಯಿಂದ ಖಂಡಿಸುತ್ತೇವೆ ಏಕೆಂದರೆ ಜಿಲ್ಲಾ ಬಸವ ಜಯಂತಿಯ ಕಾರ್ಯಕ್ರಮವು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಮಾಡುತ್ತಿಲ್ಲ ಈ ಜಯಂತಿಯು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಮತ್ತು ಜಿಲ್ಲಾ ವೀರಶೈವ ಲಿಂಗಾಯತ್ ಸಮಾಜ ಹಾಗೂ ಅನೇಕ ಬಸವ ಪರ ಸಂಘಟನೆಗಳು ಸಂಯುಕ್ತ ಆಶ್ರಯ ಮಾಡುತ್ತಿದ್ದಾರೆ.
ಇಂದು ಚಿಂಚೋಳಿಯಲ್ಲಿ ನಡೆದ ಸಭೆಯ ಬ್ಯಾನರ್ ನಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷರಾದ ಅರುಣಕುಮಾರ ಪಾಟೀಲ್ ಎಸ್ ಕೊಡಲಹಂಗರಗಾ,ಅವರ ಫೋಟೋನೇ ಹಾಕಿಲ್ಲ ಹೀಗಾಗಿ ಇನ್ನು ಮುಂದೆ ದಿನಗಳಲ್ಲಿ ಬೇರೆ ತಾಲೂಕಕ್ಕೆ ಜಿಲ್ಲಾ ಬಸವ ಸಮಿತಿ ಅಧ್ಯಕ್ಷರು ಸಭೆ ಮಾಡುವಾಗ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರ ಫೋಟೋಗಳನ್ನು ಹಾಕಿ ಸಭೆ ಮಾಡಬೇಕು ಅದೇ ರೀತಿ ಬಸವ ಪರ ಸಂಘಟನೆಗಳ ಜಿಲ್ಲಾ ಅಧ್ಯಕ್ಷರ ಫೋಟೋವನ್ನು ಹಾಕಬೇಕೆಂದು ಹೇಳಿದರು ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರಾದ ರೇವಣಸಿದ್ದಪ್ಪ ದಾದಾಪೂರ, ವಿಜಯಕುಮಾರ ಬೆಳಕೇರಿ,ಉಮಾ ಪಾಟೀಲ, ಬೀಡ ಜಂಗಮದ ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ ಉಡುಪಿ,ವೀರಶೆಟ್ಟಿ ಮಗಿ, ಶಿವಶರಣಪ್ಪ ಡೆಂಗಿ, ಸಂಪತ್ ಮುಸ್ಟರಿ, ಸಂತೋಷ್ ಪಾಟೀಲ, ವೀರೇಶ್ ಪಾಟೀಲ್, ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ವರದಿ: ಸುನಿಲ್ ಸಲಗರ