ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದ ಡಾ ಬಿ ಆರ್ ಅಂಬೇಡ್ಕರ್ ರವರ ಜಯಂತಿಯ ಹಿನ್ನಲೆ ಭೀಮ ಸಂಭ್ರಮ ಸೀಜನ್ 5 ರ ಕ್ರಿಕೆಟ್ ಟೂರ್ನಮೆಂಟ್ ನ್ನು ಶಾಸಕ ಎ ಆರ್ ಕೃಷ್ಣಮೂರ್ತಿ ರವರು ಕ್ರಿಕೆಟ್ ಆಡುವುದರ ಮೂಲಕ ಶನಿವಾರ ಚಾಲನೆ ನೀಡಿದರು.
ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢತೆ ಕಾಪಾಡಿಕೊಳ್ಳಬೇಕಾದರೆ ಕ್ರೀಡಾ ಚಟುವಟಿಕೆಗಳು ಅವಶ್ಯಕವಾಗಿದೆ.
ಯುವಕರು ಕ್ರೀಡಾ ಮನೋಭಾವನೆ ಜೊತೆಗೆ ಸಾಮಾಜಿಕ ಕಾಳಜಿಯನ್ನು ವಹಿಸಿಕೊಳ್ಳಬೇಕು ವೃದ್ದರನ್ನು, ನಿರ್ಗತಿಕರನ್ನು ಗೌರವಿಸಬೇಕು.
ಡಾ ಬಿ ಆರ್ ಅಂಬೇಡ್ಕರ್ ರವರ ಜಯಂತಿ ಹಿನ್ನಲೆ ಭೀಮ ಸಂಭ್ರಮ ಕ್ರಿಕೆಟ್ ಟೂರ್ನಮೆಂಟ್ ನ್ನು ಆಯೋಜಿಸಿದ್ದು ಸಂತಸವಾಗಿದೆ .ಅಂಬೇಡ್ಕರ್ ತತ್ವ,ಸಿದ್ದಾಂತ, ಚಿಂತನೆಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕು.
ಸರಕಾರದಿಂದ ಕೆಸ್ತೂರು ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯನ್ನು ತೆರೆಯಲು ಮಂಜೂರು ಮಾಡಲಾಗಿದೆ.
80 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಚರಂಡಿ ನಿರ್ಮಾಣಕ್ಕೆ ಯೋಜನೆ ತಯಾರಿಸಿಲಾಗಿದೆ ಅಭಿವೃದ್ಧಿಯೇ ನನ್ನ ಉದ್ದೇಶವಾಗಿದೆ.
ಇಂದಿನ ಪರಿಸ್ಥಿತಿಯಲ್ಲಿ ಸಮುದಾಯದೊಳಗೆ ಚಿಂತನ ಮಂಥನ ಸಭೆಗಳು ಆಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಯಜಮಾನರಾದ ಬಿ ನಾಗರಾಜು, ಕುಮಾರ್, ದೊರೆಸ್ವಾಮಿ, ರಾಜು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಹೊಂಗನೂರು ಚಂದ್ರು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್, ಪಿ ಎಸ್ ಐ ಆಕಾಶ್, ಕ್ರಿಕೆಟ್ , ಗ್ರಾಪಂ ಸದಸ್ಯರಾದ ಗುರುಲಿಂಗಯ್ಯ, ಪ್ರಸಾದ್, ಮಹೇಂದ್ರ, ಕ್ರಿಕೆಟ್ ಆಯೋಜಕರಾದ ಸಚಿನ್, ಮಹೇಂದ್ರ, ಮುಖಂಡರಾದ ಸಿದ್ದರಾಜು, ರಾಮಕೃಷ್ಣ, ಎಂ ನಾಗರಾಜು, ಮಧು ಕೆಸ್ತೂರು,, ಕೆ ಚಿನ್ನಸ್ವಾಮಿ, ನಾಗೇಶ್, ಕಿರಣ್ ಜೆ, ಸಂಜಯರಾಜು. ಜೆ, ರಾಘವ, ವಿಶ್ವ, ಬಸವರಾಜು, ಕಟ್ನವಾಡಿ ರಮೇಶ್, ಅಜಯ್, ಹಾಗೂ ಮುಖಂಡರು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ