ಯಳಂದೂರು :ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಯಳಂದೂರು ತಾಲ್ಲೋಕು ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದ ಕಾರ್ಯಕ್ರಮಕೆ ಕೊಳ್ಳೇಗಾಲ ಕ್ಷೇತ್ರದ ಶಾಸಕರಾದ ಎ ಆರ್ ಕೃಷ್ಣ ಮೂರ್ತಿ ರವರು ಗಿಡಕೆ ನೀರಹಾಕುವ ಮೂಲಕ ಉದ್ಘಾಟನೆ ಮಾಡಿದರು.
ಉದ್ಘಾಟಿಸಿ ಮಾತಾಡಿದ ಅವರು ಉತ್ತಮ ಅರೋಗ್ಯಕೆ ಕ್ರೀಡೆ ಅವಶ್ಯಕತೆ ಇದೆ ಮಕ್ಕಳು ಸೋಲು ಗೆಲುವನ್ನು ಒಂದೇ ಸಮಾನದಲ್ಲಿ ಸ್ವೀಕರಿಸಬೇಕು ತಾಲ್ಲೋಕು ಮಟ್ಟದಲ್ಲಿ ಗೆದ್ದು ಜಿಲ್ಲಾ ಮಟ್ಟಕೆ ಹೋಗಿಗೆದ್ದು ರಾಜ್ಯ ಮಟ್ಟದಲ್ಲಿ ಗೆದ್ದು ತಾಲ್ಲೋಕು ಹೆಸರನ್ನು ಮುಂದೆ ತರಬೇಕು ಎಂದು ತಿಳಿಸಿದರು.
ಕ್ರೀಡಾಪಟ್ಟುಗಳು ಕ್ರೀಡ ಪ್ರತಿಜ್ಞೆಯನ್ನು ಓದಿದರು.ಶಾಸಕರು ವಾಲಿಬಾಲ್ ಆಡುವುದರ ಮೂಲಕ ಆಟಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅಧ್ಯಕ್ಷರಾದ ಚಂದ್ರು, ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿಗಳದ ಮಹೇಶ್ ಕುಮಾರ್, ಉಪ ಪ್ರಾಂಶುಪಾಲರಾದ ನಂಜುಂಡಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಯೋಗೇಶ್, ಯಳಂದೂರು ಕ್ಷೇತ್ರ ಶಿಕ್ಷಣ ಅಧಿಕಾರಿಗಳದ ಮರಯ್ಯ, ದೈಹಿಕ ಶಿಕ್ಷಣ ಶಿಕ್ಷಕರಾದ ಶಾಂತರಾಜು, ಪಟ್ಟಣ ಪಂಚಾಯಿತಿ ಸದ್ಯಸರಾದ ಮಹೇಶ್, ಅಧ್ಯಕ್ಷರಾದ ಲಕ್ಷ್ಮಿಮಲ್ಲು ಹಾಗೂ ಶಿಕ್ಷಕರು ಮಕ್ಕಳು ಹಾಜರಿದ್ದರು.
ವರದಿ :ಸ್ವಾಮಿ ಬಳೇಪೇಟೆ




