ಚಾಮರಾಜನಗರ:ಕೊಳ್ಳೇಗಾಲ ಕ್ಷೇತ್ರದ ಚಾಮರಾಜನಗರ ತಾಲ್ಲೋಕು ಮುರಟಿಪಾಳ್ಯ ಗ್ರಾಮದ ಶ್ರೀಶಕ್ತಿ ಮಾಸ್ತಮ್ಮ ಮಹಿಳಾ ಸ್ವ-ಸಹಾಯ ಸಂಘದ ಸದ್ಯಸರಿಗೆ ಮೈಕ್ರೋಕ್ರೆಡಿಟ್ ಪ್ರೆರಣಾ ಯೋಜನೆಯಡಿಯಲ್ಲಿ ಸಮಾಜಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಕಲ್ಯಾಣ ಇಲಾಖೆ ಚಾಮರಾಜನಗರದ ವತಿಯಿಂದ ಮೇಕೆಗಳನ್ನು ವಿತರಣೆ ಮಾಡಿದರು ಹಾಗೂ ಬೆಳ್ಳವತ್ತ ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಬೀದಿಯಲ್ಲಿ 26ಲಕ್ಷ ಅನುದಾನಕೆ ಸಿಸಿ ರಸ್ತೆ ಚರಂಡಿ, ಹಾಗೂ ಎರಡು ಕೋಟಿ ವೆಚ್ಚದಲ್ಲಿ ಹೊಂಗನೂರು ಗ್ರಾಮದ ಹಿರಿಕೆರೆ ಅಚ್ಚುಕಟ್ಟ ಪ್ರದೇಶದ ಅಭಿವೃದ್ಧಿಗೆ ಶಾಸಕರಾದ ಎ ಆರ್ ಕೃಷ್ಣ ಮೂರ್ತಿ ರವರು ಭೂಮಿ ಪೂಜೆಯನ್ನು ನೆರೆವೇರಿಸಿದರು.
ಚಾಮರಾಜನಗರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಹೆಚ್ ವಿ ಚಂದ್ರು ಮಾತನಾಡಿ ಶಾಸಕರು ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ಮಾಡಿದರೆ ಇಂದೇ ಈ ಭಾಗದಜನರು ಕೃಷಿಕರು ಎಂದು ತಿಳಿದು ದಿವಂಗತ ರಾಜ್ಯಪಾಲರು ಬಿ ರಾಚಯ್ಯ ರವರು ರೈತರಿಗೆ ನೀರಿನ ಅನುಕೂಲವಾಗಲಿ ಎಂದು ಹಿರಿಕೆರೆ ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟವರು ಅವರಂತೆ ನಮ್ಮ ಶಾಸಕರು ಹಲವಾರು ಅಭಿವೃದ್ಧಿಗೆ ಭೂಮಿ ಪೂಜೆಯನ್ನು ಮಾಡಿದರೆ.

ಶಾಸಕ ಎ ಆರ್ ಕೃಷ್ಣಮೂರ್ತಿ ರವರು ಮಾತನಾಡಿ ಈ ಭಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆಮಾಡಲು ಸಂತೋಷವಾಗ್ತಿದೆ ಈ ಭಾಗದ ಗಿರಿಜನರು ರಸ್ತೆಗಳಿಗೆ ನಾನು ಹಿಂದೆ ಎಂ ಎಲ್ ಎ ಆಗಿದಾಗ ಬಂದು ಭೂಮಿಪೂಜೆ ಮಾಡಿದೆ ಇವಾಗ ನಾನೆ ಎಂ ಎಲ್ ಎ ಆಗಿ ಇಪ್ಪತ್ತು ವರ್ಷಗಳ ನಂತರ ಇವಾಗ ನಾನೆ ಭೂಮಿಪೂಜೆ ಮಾಡ್ತಿದೇನೆ ಬೇಜಾರಿನ ವಿಚಾರವೆಂದರೆ ಸರ್ಕಾರ ಗಿರಿಜನರನ್ನು ಅಲೆಮಾರಿಗಳು ಎಂದು ಸೇರಿಸಿರುವುದು ಯಾಕೋ ಅಂತಗೊತ್ತಿಲ್ಲ ಅಲೆಮಾರಿಗಳು ಎಂದರೆ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವವರು ಆದರೆ ಗಿರಿಜನರು ಈ ಭಾಗದ ಮೂಲನಿವಾಸಿಗಳು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಜಿಲ್ಲಾ ಅಧ್ಯಕ್ಷರು ಚಂದ್ರು. ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಯೋಗೀಶ್, RF ಸತೀಶ್.ಅಧಿಕಾರಿಗಳು. ಹಾಗೂ ಹೊಂಗನೂರು ಗ್ರಾಮಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದ್ಯಸರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ




