ಮುಂಬೈ : ಆಸ್ಕರ್-ವಿಜೇತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಮತ್ತು ಪತ್ನಿ ಸಿಯಾರಾ ರೆಹಮಾನ್ ಸುದೀರ್ಘ ಮೂರು ದಶಕಗಳ ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ರಹಮಾನ್ ಮತ್ತು ಸೈರಾ ಮಾರ್ಚ್ 1995 ರಲ್ಲಿ ಚೆನ್ನೈನಲ್ಲಿ ವಿವಾಹವಾಗಿದ್ದರು.
ಎ.ಆರ್.ರೆಹಮಾನ್ ಮತ್ತು ಅವರ ಪತ್ನಿ ಖತೀಜಾ, ರಹೀಮಾ ಮತ್ತು ಅಮೀನ್ ಎಂಬ ಮೂರು ಮಕ್ಕಳನ್ನು ಹೊಂದಿದ್ದಾರೆ. ಈ ಜೋಡಿ ಬೇರೆಯಾಗುವ ಬಗ್ಗೆ ವಂದನಾ ಶಾ ಮತ್ತು ಅಸೋಸಿಯೇಟ್ಸ್ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಮದುವೆಯಾದ ಹಲವು ವರ್ಷಗಳ ನಂತರ, ಸಾಕಷ್ಟು ಭಾವನಾತ್ಮಕ ಒತ್ತಡಗಳ ನಡುವೆ ಸಾಯಿರಾ ತಮ್ಮ ಪತಿ ಎ.ಆರ್ ರೆಹಮಾನ್‌ನಿಂದ ಬೇರ್ಪಡುವ ಕಠಿಣ ನಿರ್ಧಾರ ಕೈಗೊಂಡಿದ್ದು, ಬಹಳ ನೋವು ಹಾಗೂ ಸಂಕಟದಿಂದ ಈ ನಿರ್ಧಾರವನ್ನು ತೆಗೆದುಕೊಂಡಿರೊದಾಗಿ ಹೇಳಿಕೊಂಡಿದ್ದಾರೆ.