ಯಲಹಂಕ:ಅರದೇಶಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಅರದೇಶನಹಳ್ಳಿ ದೇವನಹಳ್ಳಿ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಗ್ರಾಮಸಭೆಯಲ್ಲಿ ಅಧ್ಯಕ್ಷರಾದ ಚೇತನ್ ಕುಮಾರ್ ಸಿ ಮತ್ತು ಉಪಾಧ್ಯಕ್ಷರು ಬಸವರಾಜರವರು ಹಾಗೂ ಸಂಘದ ಹಿತೈಷಿಗಳು ಕೆ ರಾಮಯ್ಯ ಎನ್ ಪಿ ವೆಂಕಟಸ್ವಾಮಿ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಅನಂತ್ ಕುಮಾರ್ ಎಸ್ಎಂ ಮತ್ತು ಉಪಾಧ್ಯಕ್ಷರು ಭವ್ಯ ಕೆ ಮುಖ್ಯ ಅತಿಥಿಗಳು ಭಾಗವಹಿಸಿದ್ದರು.

ಅಧ್ಯಕ್ಷರಾದ ಚೇತನ್ ಕುಮಾರ್ ಅವರು ಸಂಘವನ್ನು ಉನ್ನತ ಮಟ್ಟಕ್ಕೆ ಬೆಳೆಸಲು ಯೋಜನೆಗಳನ್ನು ಜಾರಿ ತರಲು ಚರ್ಚಿಸಿದರು ಸದಸ್ಯರ ಹಿತಾಸಕ್ತಿಯೇ ಸಂಘದ ಗುರಿ ರೈತರ ಜೀವನಾಡಿಯೇ ನಮ್ಮ ಸಹಕಾರ ಸಂಘ ಸದಸ್ಯರ ಸಂಘದ ಅಭಿವೃದ್ಧಿಯ ಮೂಲ ಉದ್ದೇಶ ಎಂಬ ಸಂದೇಶವನ್ನು ನೀಡಿದರು.
ವರದಿ:ಬಾಲಾಜಿ ವಿ




