Ad imageAd image

ಸಂಸದ ಪ್ರಜ್ವಲ್ ಅಮಾನತು,ಕೋರ ಕಮೀಟಿ,ಅಧಿಕೃತ ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ

Bharath Vaibhav
ಸಂಸದ ಪ್ರಜ್ವಲ್ ಅಮಾನತು,ಕೋರ ಕಮೀಟಿ,ಅಧಿಕೃತ ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ
WhatsApp Group Join Now
Telegram Group Join Now

ಹುಬ್ಬಳ್ಳಿ: –ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಅಮಾನತುಗೊಳಿಸಿದೆ.

ಇಲ್ಲಿನ ಡೆನಿಸನ್ಸ್ ಹೊಟೆಲ್‌ನಲ್ಲಿ ನಡೆದ ಜೆಡಿಎಸ್ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡುವ ಅಲ್ಲದೇ ಶಾಸಕ ಎಚ್.ಡಿ.ರೇವಣ್ಣ ಅವರಿಗೆ ಶೋಕಾಸ್ ನೀಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಕೋರ್ ಕಮಿಟಿ ಸಭೆಯ ನಂತರ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ,ಕೋರ್‌ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ ಅವರು ಸಭೆಯ ನಿರ್ಧಾರಗಳ ಬಗ್ಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರಲ್ಲದೇ ಒಂದು ವೇಳೆ ಎಸ್ ಐಟಿ ತನಿಖೆಯಲ್ಲಿ ಆರೋಪ ಸಾಬೀತಾದ್ರೆ ಅವರನ್ನು ಶಾಶ್ವತವಾಗಿ ಪಕ್ಷದಿಂದ ಉಚ್ಚಾಟನೆ ಮಾಡಲಾಗುತ್ತದೆ ಎಂದರು.

ಈ ಪ್ರಕರಣದ ವಿಚಾರಣೆಗೆ ಎಲ್ಲ ರೀತಿಯ ಸಹಕಾರ ಕೊಡಲಾಗುವುದು, ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ತನಿಖೆಯಲ್ಲಿ ಪ್ರಜ್ವಲ್‌ರೇವಣ್ಣ ತಪ್ಪಿತಸ್ಥರೆಂದು ಸಾಬೀತಾದರೆ ಅವರನ್ನು ಪಕ್ಷದಿಂದ ಉಚ್ಛಾಟಿಸುತ್ತೇವೆ ಎಂದು ಕುಮಾರಸ್ವಾಮಿ ಸ್ಪಷ್ಟವಾಗಿ ಹೇಳಿದ್ದಾರೆ. ನಮ್ಮ ಕುಟುಂಬಕ್ಕೆ ಮಸಿ ಬಳಿವ ವರ್ಚಸ್ಸು ಹಾಳು ಮಾಡುವ ಈ ಯತ್ನ ನಡೆದಿದೆ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿಗೆ ಸೋಲು ತರುವ ಉದ್ದೇಶದಿಂದ ಈ ಕುತಂತ್ರವನ್ನು ನಡೆಸಲಾಗಿದೆ. ತನಿಖೆಯಲ್ಲಿ ಸತ್ಯ ಬಯಲಾಗಲಿದೆ ಎಂದರು.

ಮುತ್ತಿಗೆ ಯತ್ನ : ಪತ್ರಿಕಾಗೋಷ್ಠಿ ಮುಗಿಸಿ ಕುಮಾರ ಸ್ವಾಮಿ ಹೊರ ಬರುವಾಗ ಕಾಂಗ್ರೆಸ್ ಕಾಯಕರ್ತರು ಮುತ್ತಿಗೆ ಹಾಕಲೆತ್ನಿಸಿದಾಗ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ತಳ್ಳಾಟ ನೂಕಾಟ ನಡೆಯಿತು. ಪೊಲೀಸರು ಕೊನೆಗೆ ಪರಿಸ್ಥಿತಿ ಹತೋಟಿಗೆ ತಂದರು

’ಮಹಾ ನಾಯಕ’ನ ಕೈವಾಡ : ಎಚ್ಡಿಕೆ
ಹುಬ್ಬಳ್ಳಿ : ಪೆನ್ ಡ್ರೈವ್ ಹಂಚಿಕೆ ಹಿಂದೆ ಕಾಂಗ್ರೆಸ್ ನ ಮಹಾನಾಯಕ, ಉಪಮುಖ್ಯಮಂತ್ರಿ ಕೈವಾಡವಿದೆ. ಪೆನ್ ಡ್ರೈವ್ ಹಂಚಿಕೆ ಮಾಡಿರುವುದು ಯಾರು ಅಂತ ಹೇಳಲಿ, ಪೆನ್ ಡ್ರೈವ್ ವಿಷಯ ಎಷ್ಟು ತಿಂಗಳ ಹಿಂದೆ ವಿಷ್ಯ ಗೊತ್ತಿತ್ತು. ಕಾಂಗ್ರೆಸ್ ಮಹಾನ್ ನಾಯಕ ದೊಡ್ಡ ಅಪರಾಧ ಮಾಡಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಕೋರ ಕಮೀಟಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಈ ವಿಚಾರ ಮಾತನಾಡಿ ಸಿಎಂ ಮತ್ತು ಡಿಸಿಎಂ ಮೇಲೆ ಹರಿಹಾಯ್ದರು.

  ವರದಿ :-ಸುಧೀರ್ ಕುಲಕರ್ಣಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!