Ad imageAd image

ದಲಿತ ಮುಖ್ಯಮಂತ್ರಿ ಎಚ್ ಸಿ ಮಹದೇವಪ್ಪರವರು ಆಗಲಿ ಎಂಬುದು ನಮ್ಮ ಆಸೆ :ಎ ಆರ್ ಕೆ ಕೃಷ್ಣ ಮೂರ್ತಿ

Bharath Vaibhav
ದಲಿತ ಮುಖ್ಯಮಂತ್ರಿ ಎಚ್ ಸಿ ಮಹದೇವಪ್ಪರವರು ಆಗಲಿ ಎಂಬುದು ನಮ್ಮ ಆಸೆ :ಎ ಆರ್ ಕೆ ಕೃಷ್ಣ ಮೂರ್ತಿ
WhatsApp Group Join Now
Telegram Group Join Now

ಚಾಮರಾಜನಗರ :ಜಿಲ್ಲೆಯ ಸಂತೆಮರಹಳ್ಳಿ ಹೋಬಳಿಯ ಹೊಂಗನೂರು ಗ್ರಾಮದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪ್ರತಿಮೆಯ ನಿರ್ಮಾಣಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಎಚ್ ಸಿ ಮಹದೇವಪ್ಪ ರವರು ಭೂಮಿ ಪೂಜೆ ನೆರವೇರಿಸಿದರು

ನಂತರ ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ವೇದಿಕೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಜ್ಞಾನಪ್ರಕಾಶ ಸ್ವಾಮೀಜಿ ರವರು ಉದ್ಘಾಟಿಸಿದರು.

ಕೊಳ್ಳೇಗಾಲ ಕ್ಷೇತ್ರದ ಶಾಸಕರಾದ ಎ ಆರ್ ಕೃಷ್ಣಮೂರ್ತಿ ರವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ವರ್ಚನೆ ಮಾಡುವುದರ ಮೂಲಕ ಚಾಲನೆ ನೀಡಿದರು.

ನಂತರ ಕೊಳ್ಳೇಗಾಲ ಶಾಸಕರಾದ ಎ ಆರ್ ಕೃಷ್ಣ ಮೂರ್ತಿ ಅವರು ಮಾತನಾಡಿ ಹೊಂಗನೂರು ಗ್ರಾಮದಲ್ಲಿ ಹಲವಾರು ದಿನಗಳಿಂದ ಗ್ರಾಮಸ್ಥರ ಬೇಡಿಕೆಯಾಗಿದ್ದ ಅಂಬೇಡ್ಕರ್ ಪ್ರತಿಮೆಯ ನಿರ್ಮಾಣದ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದ್ದಾರೆ ಅಂಬೇಡ್ಕರ್ ರವರ ಆದರ್ಶವನ್ನೇ ಮೈಗೂಡಿಸಿಕೊಂಡು ಕೆಲಸ ಮಾಡುತ್ತಿರುವ ಎಚ್ ಸಿ ಮಹದೇವಪ್ಪ ರವರು ಸಂವಿಧಾನದ ಬಗ್ಗೆ ತಿಳಿಸಲು ಅಂಬೇಡ್ಕರ್ ಅವರ ಬಗ್ಗೆ ತಿಳಿಸಲು ಸಂವಿಧಾನ ಜಾಗೃತ ಕಾರ್ಯಕ್ರಮಗಳನ್ನೆಲ್ಲ ಕರ್ನಾಟಕ ಸರ್ಕಾರದಿಂದ ನಡೆಸಿದ್ದಾರೆ ಇದಕ್ಕೆ ಇವರೇ ಮೂಲಕ ಕಾರಣ ದಲಿತ ಮುಖ್ಯಮಂತ್ರಿಆಗುವ ಎಲ್ಲಾ ಅರ್ಹತೆಗಳು ಇವರಲ್ಲಿದೆ ಇವ್ರು ಮುಂದಿನ ದಲಿತ ಮುಖ್ಯಮಂತ್ರಿಯಾಗಲಿ ಎಂಬುದು ನಮ್ಮ ಆಸೆ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಹೆಚ್ ಸಿ ಮಹದೇವಪ್ಪ ಮಾತನಾಡಿ ಅಂಬೇಡ್ಕರ್ ರವರು ಒಬ್ಬ ವ್ಯಕ್ತಿಯಲ್ಲ ಹಿಂದುಳಿದವರ ಶಕ್ತಿ ಕೆಲವು ವ್ಯಕ್ತಿಗಳು ಅಂಬೇಡ್ಕರ್ ರವರನ್ನು, ಸಂವಿಧಾನವನ್ನು, ವಿರೋಧ ಮಾಡುತ್ತಾರೆ. ನಿಜವಾಗಲೂ, ಸಂವಿಧಾನದ ಅರಿವಿಲ್ಲದ ವ್ಯಕ್ತಿಗಳೇ ಇಂತಹ ಕೆಲಸ ಮಾಡುವವರು ಸಂವಿಧಾನವನ್ನು ತಿಳಿಯಬೇಕಾದರೆ ಮೊದಲು ಸಂವಿಧಾನ ಓದಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬುದ್ಧರತ್ನ ಬಂತೆಜಿ, ಜ್ಞಾನ ಪ್ರಕಾಶ ಸ್ವಾಮೀಜಿ, ಜಿಲ್ಲಾ ಗ್ಯಾರೆಂಟಿ ಅಧ್ಯಕ್ಷ ಎಚ್ಪಿ ಚಂದ್ರು, ಹಾಗೂ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳು ಹಾಜರಿದ್ದರು.
ವರದಿ :ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!