———————————-ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್* ಬಾಗಿ
ರಾಯಚೂರು: ಗ್ರಾಮೀಣ ಕ್ಷೇತ್ರ ಸುಕ್ಷೇತ್ರ ಅರೋಲಿ ಹೂಲಿಗೆಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾ ರಥೋತ್ಸವದ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಜರುಗಿತು.. ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ರಥಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ರಥೋತ್ಸವ ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷ ಮಾನ್ವಿ ತಹಸಿಲ್ದಾರ್ ಭೀಮರಾಯ ರಾಮಸಮುದ್ರ.ಕಂದಾಯ ನಿರೀಕ್ಷಕರು ಜಲ್ಲಿ ಹನುಮಂತಪ್ಪ ನಾಯಕ್. ಪ್ರಧಾನ ಅರ್ಚಕರು ಉದಯ ಪೂಜಾರಿ. ಜಾತ್ರೆ ಉಸ್ತುವಾರಿ ಉಪತಾಶಿಲ್ದಾರ್ ರಾವುಫ್ ಭಾಗವಹಿಸಿ ಭಕ್ತರಿಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿದ್ದರು ಹನುಮಂತಪ್ಪ ಅಯ್ಯನಗೌಡ ದದ್ದಲ್ ಆರೋಲಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರುಗಳು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನಗೌಡ




