ಸೇಡಂ: ಮುಧೋಳ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಘಪುರ ಗ್ರಾಮದಲ್ಲಿ ದರ್ಗಾ ಹುಂಡಿ ಒಡೆದು ಕಳ್ಳತನ ಕುರಿತು ಗುನ್ನೇ ನo 74/25 ಯು/ಎಸ್ 331(3)ರದಲ್ಲಿ ಪ್ರಕರಣ ದಾಖಲಾಗಿದ್ದು.
ಪ್ರಕರಣ ಕುರಿತು ಮಾನ್ಯ ಪೊಲೀಸ್ ಅಧೀಕ್ಷಕರು ಹಾಗೂ ಅಪರ ಪೊಲೀಸ್ ಅಧೀಕ್ಷಕರು ಮತ್ತು ಉಪಅದೀಕ್ಷಕರು ಚಿಂಚೋಳಿ ರವರ ಮಾರ್ಗದರ್ಶನ ಮೇರೆಗೆ ಪಿಐ ದೌಲತ್ ಎನ್ ಕೆ ನೇತೃತ್ವದಲ್ಲಿ ಚಂದ್ರಶೇಖರ್ ಪಿಎಸ್ಐ ಮತ್ತು ಸಿಬ್ಬಂದಿಗಳಾದ ಶಂಕರಗೌಡ, ವೀರರೆಡ್ಡಿ ಭೀಮಣ್ಣ ಎಎಸ್ಐ, ಅಲ್ಲಾಭಕ್ಷ ಒಳಗೊಂಡಂತೆ ರಾಘಪುರ ಗ್ರಾಮದ ಮೌಲಾಲಿ ದರ್ಗಾದ ಹುಂಡಿಯನ್ನು ಒಡೆದು ಕಳ್ಳತನ ಮಾಡಿದ ಆರೋಪಿಯಾದ ನರಸಿಂಹಲು ರಾಘಪುರ ಎಂಬಾತನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂದನ ಕುರಿತು ಕಳಿಸಿಕೊಡಲಾಯಿತು ಇದಕ್ಕೆ ಮಾನ್ಯ ಪೊಲೀಸ್ ಅಧಿಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




