ಸಿಂಧನೂರು : ನ 24, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಿಗಿ ನೇತೃತ್ವದಲ್ಲಿ ತಹಶೀಲ್ದಾರ ಕಚೇರಿ ಮುತ್ತಿಗೆ ಹಾಕಿ ಈ ವರ್ಷ ೪ ರಿಂದ ೫ ತಿಂಗಳಗಳ ಕಾಲ ಅತಿಯಾದ ಮಳೆ ಬಿದ್ದು ಸೂರ್ಯಕಾಂತಿ. ತೊಗರಿ. ಹತ್ತಿ.ಹಾಳಾಗಿದ್ದು ಭತ್ತ ಕೂಡ ದುಂಡಾಣು ರೋಗದಿಂದ ಇಳುವರಿ ಕಡಿಮೆಯಾಗಿದ್ದು ರೈತರು ನಷ್ಟ ಹೊಂದಿ ಕಂಗಲಾಗಿದ್ದು ಬ್ಯಾಂಕಿನಲ್ಲಿ ಪಡೆದ ಬೆಳೆ ಸಾಲ ಮತ್ತು ಹೊರಗಿನ ಸಾಲಕ್ಕೆ ತುತ್ತಾಗಿ ಸಂಕಷ್ಟದಲ್ಲಿದ್ದಾರೆ ಇಂತಹ ಸಮಯದಲ್ಲಿ ಸರ್ಕಾರ ಪರಿಹಾರ ಕೊಡುವದಾಗಿ ಹೇಳಿದ್ದು ಇನ್ನುವರೆಗೂ ಯಾವುದೇ ಪರಿಹಾರ ರೈತರ ಖಾತೆಗೆ ಬಂದಿಲ್ಲ ಖರದಿ ಕೇಂದ್ರಗಳು ಡಿಸೆಂಬರ್ ೦೧ ರಿಂದ ನೋಂದಾಣಿ ಪ್ರಕ್ರಿಯೆಗಳು ಪ್ರಾರಂಭ ಮಾಡುತ್ತಿದ್ದು ಒಬ್ಬ ರೈತನಿಂದ ೧೫೦ ಕ್ವಿಂಟಲ್ ಜೋಳ ಖರೀದಿ ಮಾಡುವ ಬದಲಾಗಿ ರೈತರು ಬೆಳೆದ ಸಂಪೂರ್ಣ ಜೋಳವನ್ನು ಖರೀದಿ ಮಾಡಲು ಆದೇಶ ಹೊರಡಿಸಬೇಕು ಮತ್ತು ಎರಡನೆಯ ಬೆಳೆಗೆ ನೀರು ಹರಿಸಬೇಕೆಂದು ಪ್ರತಿಭಟಸಿ ತಹಶೀಲ್ದಾರ ಕಚೇರಿ ಮುತ್ತಿಗೆ ಹಾಕುವ ವೇಳೆ ಬಿಗುವಿನ ವಾತಾವರಣ ಉಂಟಾಗಿ ರೈತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಮೀನ್ ಪಾಷಾ ದಿದ್ದಿಗಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಬಸವರಾಜ ಹಂಚಿನಾಳ ಜಿಲ್ಲಾಧ್ಯಕ್ಷರು ರಾಯಚೂರು, ಶಿವನಗೌಡ ಗುಡದೂರು ತಾಲೂಕಾಧ್ಯಕ್ಷರು, ಅಪ್ಪಣ್ಣ ಹುಡೇದ್ ತಾಲೂಕ ಗೌರವಾಧ್ಯಕ್ಷರು, ರೈತ ಮುಖಂಡರಾದ: ಬಸವರಾಜ ಗೊಡಿಹಾಳ ನಾಗನಗೌಡ ಪೋತ್ನಾಳ, ವೀರೇಶ್ ಮಡಿವಾಳ ಸೇರಿದಂತೆ ಇನ್ನು ಅನೇಕರಿದ್ದರು
ವರದಿ :ಬಸವರಾಜ ಬುಕ್ಕನಹಟ್ಟಿ,




