ಹುಬ್ಬಳ್ಳಿ:- ಛೋಟಾ ಮುಂಬೈ ಎಂದೇ ಹೆಸರಾಗಿರುವ ಹುಬ್ಬಳ್ಳಿಯಲ್ಲಿ ಅನ್ನ ಭಾಗ್ಯ ಯೋಜನೆಗೆ ಕನ್ನ,ಹಾಕುತ್ತಿರುವ ದಂಧೆ ಎಗ್ಗಿಲ್ಲದೇ ರಾಜಾರೋಷವಾಗಿ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಖಚಿತ ಮಾಹಿತಿ ಮೇರೆಗೆ ಪಡಿತರ ಅಕ್ಕಿಯ ಕಳ್ಳಸಾಗಣೆ ಮಾಡುತ್ತಿರುವ ಖದೀಮರನ್ನು ಹೆಡೆಮುರಿ ಕಟ್ಟುವಲ್ಲಿ ಅಧಿಕಾರಿಗಳು ಅಕ್ಷರಶಃ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ ಇಸ್ಲಾಂಪುರ ಎಂಬುವಲ್ಲಿ ಬಡವರಿಗೆ ಉಚಿತವಾಗಿ ವಿತರಿಸಲು ಮೀಸಲಿಟ್ಟ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಖಲಂದರ್ ಅಲ್ಲಾಬಕ್ಷ ಅರಳಿಕಟ್ಟಿ ಎಂಬುವರನ್ನು ಪೊಲೀಸರು ನಿನ್ನೆ ತಡರಾತ್ರಿ ಬಂಧನ ಮಾಡಿದ್ದಾರೆ.
ಆರೋಪಿಯ ವಿಚಾರಣೆ ವೇಳೆ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ದುಡ್ಡಿನ ವ್ಯಾಮೋಹದಿಂದ ಹೆಚ್ಚಿನ ಬೆಲೆಗೆ ಸದಾನಂದ ಕುರ್ಲಿ ಮತ್ತು ಸಚಿನ್ ಜರ್ತಾಕರ ಎಂಬ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದೆ ಎಂದು ಒಪ್ಪಿಕೊಂಡಿದ್ದು ಬಯಲಾಗಿದೆ.
ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕರಾದ ಅಬ್ದುಲ್ ಮಜೀದ್ ಖತೀಬ್, ಸಹಾಯಕ ನಿರ್ದೇಶಕರಾದ ವಸುಂದರಾ ಹೆಗ್ಡೆ,ಹಾಗೂ ಸಿಸಿಬಿ ಸಿಬ್ಬಂದಿಯಾದ ವಿಎಸ್ಐಬಿಎನ್ ಲಂಗೋಟಿ, ಎಪ್ ಬಿ ಕುರಿ, ಎಸ್ಆರ್ ಇಚ್ಛಂಗಿ, ಹಾಗೂ ಕಸಬಾ ಪೊಲೀಸ ಠಾಣೆಯ ಎಎಸ್ಐ ಆದ ಪಿಎಂ ಗುಡ್ಡೇಕಾರ ಹಾಗೂ ಇನ್ನೂ ಅನೇಕ ಸಿಬ್ಬಂದಿಗಳು ಸಹ ಇದ್ದರು.
ಸದ್ಯ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸುಮಾರು 1 ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.ಪೋಲಿಸರು ಹಾಗೂ ಆಹಾರ ಅಧಿಕಾರಿಗಳ ಈ ಕಾರ್ಯವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ:- ನಿತೀಶಗೌಡ ತಡಸ ಪಾಟೀಲ್