ಮೊಳಕಾಲ್ಮುರು: ಸ್ಥಳೀಯ ಬ್ಯಾಂಕ್‌ಗಳಿಂದ ಹಣ ಬಿಡಿಸಿಕೊಂಡು ತೆರಳುತ್ತಿದ್ದ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ ಇವರ ಗಮನವನ್ನು ಬೇರೆಡೆ ಸೆಳೆದು ಹಣ ಲಪಟಾಯಿಸಿ ಎಸ್ಕೇಪ್ ಆಗುತ್ತಿದ್ದ ಖತರ್ನಾಕ್ ಕಳ್ಳನನ್ನು ಶನಿವಾರದಂದು ಮೊಳಕಾಲ್ಮುರು ಪಟ್ಟಣದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಭದ್ರಾವತಿ ಟೌನ್ ಎನ್.ಸೂರ್ಯ (19) ಎಂದು ಗುರುತಿಸಲಾಗಿದೆ. ಈತನಿಂದ ಪೊಲೀಸರು ನಾಲ್ಕು ಲಕ್ಷ ರೂ ಹಣ ವಶಪಡಿಸಿಕೊಂಡು ಈತನ ತಂಡದ ಸದಸ್ಯರ ಬಂಧನಕ್ಕೆ ವ್ಯಾಪಕ ಬಲೆ ಬೀಸಿದ್ದಾರೆ.

ಪಟ್ಟಣದ ಭಾಗ್ಯಜ್ಯೋತಿ ನಗರದ ನಿವಾಸಿ ಹಾಗೂ ಬೆಸ್ಕಾಂ ಇಲಾಖೆ ನಿವೃತ್ತ ಲೆಕ್ಕಾಧಿಕಾರಿ ಮೆಹಬೂಬ್ ಬರಕಾದಾರ್ 2025 ಫೆಬ್ರವರಿ 14 ರಂದು ಪಟ್ಟಣದ ಕೆನರಾ ಬ್ಯಾಂಕ್‌ನಿಂದ 1 ಲಕ್ಷ ರೂ ಹಣ ಬಿಡಿಸಿಕೊಂಡು ಬೈಕ್ ಸೈಡ್ ಬ್ಯಾಗ್‌ನಲ್ಲಿ ಹಣವಿಟ್ಟು ತನ್ನ ಆಫೀಸ್ ಒಳಹೋಗಿ ಹೊರ ಬರುವಷ್ಟರಲ್ಲಿ ಈ ಹಣವನ್ನು ಲಪಟಾಯಿಸಲಾಗಿತ್ತು.
ಆಗಸ್ಟ್ 18ರಂದು ತಾಲೂಕಿನ ಕೋನಾಪುರ ನಿವಾಸಿ ಅಶೋಕ ಸಿದ್ದಾಪುರ ಪ್ರೌಢಶಾಲೆಯ ಶಿಕ್ಷಕ ಸೋಮಶೇಖರ್ ತನ್ನ ಮನೆಯಲ್ಲಿದ್ದ 1 ಲಕ್ಷ ರೂ ಹಾಗೂ ಎಸ್‌ಬಿಐ ಬ್ಯಾಂಕ್‌ನಿಂದ 4 ಲಕ್ಷ ರೂ ಬಿಡಿಸಿಕೊಂಡು ಒಟ್ಟು ಐದು ಲಕ್ಷ ರೂಗಳನ್ನು ಬೈಕ್‌ನ ಸೈಡ್ ಬ್ಯಾಗಿನಲ್ಲಿಟ್ಟಿದ್ದನ್ನು ಗಮನಿಸಿದ್ದ ಕಳ್ಳನೊಬ್ಬ ಬೈಕ್‌ನ ಟೈರ್ ಗಾಳಿ ತೆಗೆದು ಹಣವನ್ನು ಲಪಟಾಯಿಸಿ ಪರಾರಿಯಾಗಿದ್ದನು.
ಈ ಸಂಬಂಧ ಮೊಳಕಾಲ್ಮುರು ಪಟ್ಟಣದ ಪಿಎಸ್‌ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ ಅವರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಡಾ. ಶಿವಕುಮಾರ್, ಡಿವೈಎಸ್‌ಪಿ ಸತ್ಯನಾರಾಯಣರಾವ್, ಸಿಪಿಐ ಆರ್.ನಾಗರಾಜ್ ಅವರ ಮಾರ್ಗದರ್ಶನದಲ್ಲಿ ತನ್ನ ಸಿಬ್ಬಂದಿಯ ಜೊತೆಗೂಡಿ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು ಬಂಧಿತನಿಂದ ಬರೋಬ್ಬರಿ 4ಲಕ್ಷ ಹಣ ಜಪ್ತಿ ಮಾಡಿದ್ದಾರೆ.
ಪಿಎಸ್ ಐ ಮಹೇಶ್ ಲಕ್ಷ್ಮಣ್ ಹೊಸಪೇಟೆಯವರ ಕಾರ್ಯಕ್ಕೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ತಂಡದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸತೀಶ್,ಖಾದರ್ ಭಾಷಾ, ಶಿವಾನಂದ, ಪ್ರಭುದೇವ್, ಹುಲುಗಪ್ಪ ಇದ್ದರು.
ವರದಿ:ಪಿಎಂ ಗಂಗಾಧರ




