Ad imageAd image

ಎಪಿಎಂಸಿ ಪೊಲೀಸರಿಂದ ಸರಗಳ್ಳನ ಬಂಧನ; ಸುಮಾರು 2 ಲಕ್ಷ ಮೌಲ್ಯದ ಮಂಗಳಸೂತ್ರ ವಶ

Bharath Vaibhav
ಎಪಿಎಂಸಿ ಪೊಲೀಸರಿಂದ ಸರಗಳ್ಳನ ಬಂಧನ; ಸುಮಾರು 2 ಲಕ್ಷ ಮೌಲ್ಯದ ಮಂಗಳಸೂತ್ರ ವಶ
WhatsApp Group Join Now
Telegram Group Join Now

ಬೆಳಗಾವಿ :-ದಿನಾಂಕ 16. 5. 2024 ರಂದು ಪಿರ್ಯಾದಿ ಶ್ರೀಮತಿ ಪ್ರೀತಿ ನಾರ್ವೇಕರ್ ರವರು ಎಪಿಎಂಸಿ ಹತ್ತಿರದ ಸಾಕರೆ ಕಿರಾಣಿ ಅಂಗಡಿ ಪಕ್ಕದಲ್ಲಿ ಸಾಯಂಕಾಲ 7.30ಕ್ಕೆ ನಡೆದುಕೊಂಡು ಹೋಗುವಾಗ ಅವರ ಹಿಂದಿನಿಂದ ಬಂದ ವ್ಯಕ್ತಿ ಕೊರಳಲ್ಲಿದ್ದ ಮಂಗಳಸೂತ್ರವನ್ನು ಕಿತ್ತುಕೊಂಡು ಹೋದ ಬಗ್ಗೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಆರೋಪಿತನ ಜಾಡು ಹಿಡಿದ ಎಪಿಎಂಸಿ ಪೊಲೀಸರು ಸಂಶಯುಕ್ತ ಆರೋಪಿತನಾದ ಸೋಮೇಶ ಲಕ್ಷ್ಮಣ ಶಂಭುಚೆ (37) ಸಾ. ಕಂಗ್ರಾಳ ಗಲ್ಲಿ ಬೆಳಗಾವಿ ಈತನನ್ನು ವಶಕ್ಕೆ ಪಡೆದುಕೊಂಡು , ವಿಚಾರಣೆಗೊಳಪಡಿಸಿ ಆತನಿಂದ ಒಟ್ಟು ರೂ.2,12,400/- ಮೌಲ್ಯದ ಬಂಗಾರದ ಮಂಗಳಸೂತ್ರವನ್ನು ವಶ ಪಡಿಸಿಕೊಂಡು ಆರೋಪಿತನ ವಿರುದ್ಧ ಕಾನೂನು ಕ್ರಮ ಜರುಗಿಸಿ,ನ್ಯಾಯಾಂಗ ಬಂಧನಕ್ಕೆ ನೀಡಿ ಪ್ರಕರಣದ ತನಿಖೆ ಮುಂದುವರೆಸಲಾಗಿದೆ.

*ಆರೋಪಿತನನ್ನು ಪತ್ತೆ ಮಾಡಿ ಪ್ರಕರಣ ಬೆಳಕಿಗೆ ತಂದ ಪಿಐ ಎಪಿಎಂಸಿ ಹಾಗೂ ಅವರ ತಂಡವನ್ನು ಮಾನ್ಯ ಪೋಲಿಸ್ ಆಯುಕ್ತರು ಹಾಗೂ ಡಿಸಿಪಿ ರವರುಗಳು ಮೆಚ್ಚುಗೆ ವ್ಯಕ್ತ ಪಡಿಸಿರುತ್ತಾರೆ.*

ವರದಿ:- ಮಹಾಂತೇಶ್ ಎಸ್ ಹುಲಿಕಟ್ಟಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!