Ad imageAd image

ಮೋಟಾರ್ ಸೈಕಲ್ ಗಳ ಕಳ್ಳತನ ಮಾಡುತ್ತಿರುವ ಆರೋಪಿಗಳ ಬಂಧನ

Bharath Vaibhav
ಮೋಟಾರ್ ಸೈಕಲ್ ಗಳ ಕಳ್ಳತನ ಮಾಡುತ್ತಿರುವ ಆರೋಪಿಗಳ ಬಂಧನ
WhatsApp Group Join Now
Telegram Group Join Now

ಹಾವೇರಿ:- ಬಂಕಾಪುರ ಪೊಲೀಸ್ ಠಾಣೆಯಲ್ಲಿ ಸರಿಸುಮಾರು 2ಲಕ್ಷ ಬೆಲೆಯ 5 ಮೋಟರ್ ಸೈಕಲ್ ಗಳನ್ನು  ಜಪ್ತಿ ಮಾಡಿ ವಶಕ್ಕೆ ಪಡೆದು  ಕೊಂಡಿದ್ದಾರೆ.

ದಿನಾಂಕ 31/05/2024 ರಂದು ಬಂಕಾಪುರ – ಹಾವೇರಿ ರಸ್ತೆಯಲ್ಲಿ ಆರೋಪಿಗಳಾದ
1) ಅಬ್ದುಲ್ ಖಾದರ್ ಅಲಿಯಾಸ್ ಇಸ್ಮಾಯಿಲ್ ತಂದೆ ಮಹಮ್ಮದ್ ಗೌಸ್ ವಯಾ 30,
2) ಮೌಲಾಲಿ ತಂದೆ ಮಕ್ಬೂಲ್ ಸಾಬ್ ಹಾನಗಲ್ಲ ವಯಾ 39,
3) ನಿಸಾರ್ ಅಹ್ಮದ್ ಅಲಿಯಾಸ್ ಆರಿಫ್ ತಂದೆ ಅಬ್ದುಲ್ ಸಾತಾರ್ ಹೀರೇಕಾಂಶಿ ವಯಾ 21, ಈ ಮೂವರು ಆರೋಪಿಗಳು ಸೇರಿಕೊಂಡು ಹಾವೇರಿ. ಮುಂಡಗೋಡ. ಶಿರಸಿ ಮತ್ತು ಹಾನಗಲಗಳಲ್ಲಿ ಕಳ್ಳತನ ಮಾಡಿಕೊಂಡು ಹುಬ್ಬಳ್ಳಿಗೆ ಮಾರಾಟಕ್ಕಾಗಿ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಸಿಕ್ಕಿಹಾಕಿಕೊಂಡಿರುತ್ತಾರೆ.

ಆರೋಪಿತರಿಗೆ ಪತ್ತೆ ಮಾಡುವಂತೆ ಮೇಲಾಧಿಕಾರಿಗಳಾದ ಶ್ರೀ ಅಂಶುಕುಮಾರ ಎಸ್ ಪಿ ಹಾವೇರಿ, ಶ್ರೀ ಸಿ ಗೋಪಾಲ ಹೆಚ್ಚುವರಿ ಎಸ್ ಪಿ ಹಾವೇರಿ, ಹಾಗೂ ಮಂಜುನಾಥ ಡಿವೈಎಸ್ಪಿ ಸಾಹೇಬರು ಶಿಗ್ಗಾಂವ, ಶ್ರೀ ಮತಿ ಶ್ರೀದೇವಿ ಪಾಟೀಲ್ ಸಿಪಿಐ ಶಿಗ್ಗಾವಿ ಇವರ ನೇತೃತ್ವದಲ್ಲಿ ಪಿಎಸ್ಐ ಆದ ಶ್ರೀ ಶರಣಪ್ಪ ಹoಡ್ರಗಲ್ ಮತ್ತು ಸಿಬ್ಬಂದಿಯವರು ಈ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ಬಂಕಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿತರಿಗೆ ದಸ್ತಗಿರಿ ಮಾಡಿ ಕಳ್ಳತನ ಮಾಡಿದ್ದ ಮೋಟಾರ್ ಸೈಕಲ್ ಗಳನ್ನು ವಶಪಡಿಸಿಕೊಂಡಿದ್ದು, ಸರಿಸುಮಾರು 2 ಲಕ್ಷ ರೂ. ಬೆಲೆಯ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಜಪ್ತಿ ಮಾಡಲಾದ ವಾಹನಗಳ ವಿವರಗಳು ಈ ಕೆಳಗಿನಂತಿವೆ:
1) ಹೀರೋ ಪ್ಯಾಶನ್ ಪ್ರೊ ಮೋಟಾರ್ ಸೈಕಲ್ ನಂಬರ್ – KA31 U 3243

2) ಹೀರೋ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂಬರ್ KA27 EE 0900

3)ಹೀರೋ ಸ್ಪ್ಲೆಂಡರ್ ಪ್ರೊ ಮೋಟಾರ್ ಸೈಕಲ್ ನಂಬರ್ KA27 ET 6245

4) ಹೀರೋ ಸ್ಪ್ಲೆಂಡರ್ ಪ್ಲಸ್ ಪ್ರೊ ಮೋಟಾರ್ ಸೈಕಲ್ ನಂಬರ್ KA31 U 3441

5) ಹೀರೋ CD ಮೋಟಾರ್ ಸೈಕಲ್.

ಈ ಮೇಲ್ಕಂಡ ವಾಹನಗಳನ್ನು ಜಪ್ತಿ ಮಾಡಿ ವಶಕ್ಕೆ ಪಡೆಯಲಾಗಿದೆ.

ವರದಿ : ರಮೇಶ್ ತಾಳಿಕೋಟಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!