ಬೆಳಗಾವಿ : ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಮೂರನೇ ದರ್ಜೆಯ ಸಿನಿಮಾದ ಡೈಲಾಗ್ ಗಳನ್ನು ಹೇಳುತ್ತಾ ಶೋಕಿಗಾಗಿ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಮೇಕಲಮರಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಮುಶ್ರಫ್ ಖಾನ್ ಬಂಧಿತ ಆರೋಪಿ.ಈತ ಮಾ.28 ರಂದು ರಂದು ಕತ್ತಿ, ಖಡ್ಗ ಝಳಪಿಸುತ್ತಾ ದೊಡ್ಡ ಹೀರೋ ರೀತಿಯಲ್ಲಿ ಫೋಸು ಕೊಡುತ್ತಾ ತನ್ನ ಪೌರುಷವನ್ನು ಮೆರೆಯುವ ವಿಡಿಯೋ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದ. ಇದನ್ನು ಗಮನಿಸಿದ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಸಿಬ್ಬಂದಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದರು.
ಗುರುವಾರ ಮುಶ್ರಫ್ ಖಾನ್ ನನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಪೊಲೀಸರುನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಈ ರೀತಿ ಯುವಕರು ಶೋಕಿ ಮಾಡಲು ಹೋಗಿ ಫಜೀತಿಯಲ್ಲಿ ಸಿಲುಕಬಾರದು ಎಂದು ಪೊಲೀಸ್ ಅಧಿಕಾರಿ ಭೀಮಾಶಂಕರ್ ಗುಳೇದ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.