ಕಲಘಟಗಿ: ವಲಯದ ಹಸರಂಬಿ ಶಾಖೆ, ಗಳಗಿ ಗಸ್ತು, ಕೆ. ಶೀಗಿಗಟ್ಟಿ ಅರಣ್ಯ ಪ್ರದೇಶ ಗಂಭಾಪುರದಿಂದ ಹುಲಕೊಪಕ್ಕೆ ಹೋಗುವ ರಸ್ತೆಯಲ್ಲಿ ಕಾಡು ಹಂದಿ ಮೃತ ದೇಹವನ್ನು ಸಾಗಿಸುತ್ತಿರುವವರನ್ನು ವನ್ಯಜೀವಿ ಸಂರಕ್ಷಣಾ ಕಾಯಿದೆ ಉಲ್ಲಂಘನೆ ಅಡಿ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಲಾಗಿದೆ.
ಆರೋಪಿತರಾದ ಬಿ. ಗುಡಿಹಾಳ ಗ್ರಾಮದ ಸಂಜೀವ ನಿಂಗಪ್ಪ ಕೊಪ್ಪದ ಹಾಗೂ ದಾಸ್ತಿಕೊಪ್ಪ ಗ್ರಾಮದ ಮಂಜುನಾಥ ಚಂದ್ರಶೇಖರ ಹುಲ್ಲಂಬಿ ಇವರನ್ನು ಬಂಧಿಸಿ ನ್ಯಾಯಾಲಯದ ವಶಕ್ಕೆ ನೀಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಡು ಹಂದಿಯ ಮೃತ ದೇಹ, ದ್ವಿಚಕ್ರ ವಾಹನ ಹಾಗೂ 2 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ವಿವೇಕ ಕವರಿ,ಉಪಅರಣ್ಯ ಸಂರಕ್ಷಣಾಧಿಕಾರಿಗಳು. ಧಾರವಾಡ ವಿಭಾಗ ಧಾರವಾಡರವರ ಹಾಗೂ ಪರಿಮಳ ವಿ.ಎಚ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಧಾರವಾಡ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಅರುಣಕುಮಾರ ಅಷ್ಟಗಿ ಬ, ವಲಯ ಅರಣ್ಯಾಧಿಕಾರಿ ಕಲಘಟಗಿ, ರವರ ನೇತೃತ್ವದಲ್ಲಿ ಶಿವಾನಂದ ಮಾದರ ಉಪ ವಲಯ ಅರಣ್ಯಾಧಿಕಾರಿ, ಗುರುರಾಜ ಎಚ್ ಗಸ್ತು ಅರಣ್ಯ ಪಾಲಕ, ಫಕ್ಕಿರೇಶ ಹೊಸಮನಿ, ಈಶ್ವರ ನಾಗಣ್ಯವರ ಕಾವಲುಗಾರರು ಇದ್ದರು.
ವರದಿ : ಶಶಿಕುಮಾರ ಕಲಘಟಗಿ