ಕಾರವಾರ : ಸರ್ಕಾರಿ ಕೆಲಸ ಕೊಡಿಸೋದಾಗಿ ನಂಬಿಸಿ ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿದ್ದಾರೆ.
30 ವರ್ಷದ ಹಿಂದೇನೆ ನಡೆದಿದ್ದು, ಆ ಕೇಸ್ ಅನ್ನು ಬೆನ್ನತ್ತಿದ ಪೊಲೀಸರು ಕೇಸ್ ಬಯಲಿಗೆಳೆದಿದ್ದಾರೆ.ಅಲ್ದೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕೇವಲ 200 ರೂಪಾಯಿಯನ್ನು ಪಡೆದು ಔಸಂಘಟನೆಯ ಮುಖಂಡ ಎಂದು ಹೇಳಿಕೊಂಡು ತಿರುಗುತ್ತಿದ್ದ ಕೇಶವಮೂರ್ತಿ ರಾವ್ ಈ ಭಾಗದ ಅನೇಕ ಜನರಿಗೆ ಮೋಸ ಮಾಡಿದ್ದರು.
ಈ ಬಗ್ಗೆ 18-02-1995 ರಂದು ಶಿರಸಿಯ ಗ್ರಾಮೀಣ ಠಾಣೆಯಲ್ಲಿ ತಾಲೂಕಿನ ಉಂಚಳ್ಳಿಯ ವೆಂಕಟೇಶ ಮಹದೇವ ವೈದ್ಯ ಎಂಬುವವರು ಪ್ರಕರಣವೊಂದನ್ನು ದಾಖಲಿಸಿದ್ದರು.
ಕೇಶವಮೂರ್ತಿ ರಾವ್ ಎಂಬ ವ್ಯಕ್ತಿ 200 ರೂಪಾಯಿ ಪಡೆದಿದ್ದರು.ತನಗೆ ಪ್ರಭಾವಿ ವ್ಯಕ್ತಿಗಳ ಪರಿಚಯವಿದೆ. ಸರ್ಕಾರಿ ಕಚೇರಿಯಲ್ಲಿ ನೌಕರಿ ಕೊಡಿಸುತ್ತೇನೆಂದು ಹೇಳಿದ್ದರು. ಆದರೆ ಅದೆಷ್ಟೋ ದಿನಗಳಾದರೂ ನೌಕರಿ ಸಿಗದೇ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಸದ್ಯ ಶಿರಸಿಯಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿರೋ ಮಂಜುನಾಥ ಗೌಡ ಸುದೀರ್ಘ ಪ್ರಕರಣಗಳ ಪಟ್ಟಿ ಪರಿಶೀಲಿಸುವ ಸಂದರ್ಭದಲ್ಲಿ 30 ವರ್ಷದ ಹಿಂದಿನ ಪ್ರಕರಣವನ್ನು ಗಮನಿಸಿದ್ದಾರೆ.
ಪ್ರಕರಣದ ಜಾಡು ಹತ್ತಿದಾಗ ಕೇಶವ್ ಮೂರ್ತಿ ರಾವ್ ಬೆಂಗಳೂರಲ್ಲಿ ಇರೋದು ಪಕ್ಕಾ ಆಗಿದೆ. ಅಂತಿಮವಾಗಿ ಅವರನ್ನು ಬಂಧಿಸಲಾಗಿದೆ. ಶಿರಸಿಗೆ ಕರೆದುಕೊಂಡು ಬಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.