Ad imageAd image

ನವಜಾತ ಶಿಶು ಕೊಂದು ಕಸದ ತೊಟ್ಟಿಯಲ್ಲಿ ಎಸೆದ ಆರೋಪದ ಮೇಲೆ ಬಂಧನ

Bharath Vaibhav
ನವಜಾತ ಶಿಶು ಕೊಂದು ಕಸದ ತೊಟ್ಟಿಯಲ್ಲಿ ಎಸೆದ ಆರೋಪದ ಮೇಲೆ ಬಂಧನ
WhatsApp Group Join Now
Telegram Group Join Now

ಬೆಳಗಾವಿ: ನವಜಾತ ಶಿಶುವನ್ನು ಕೊಂದು ಶವವನ್ನು ಕಸದ ತೊಟ್ಟಿಯಲ್ಲಿ ಎಸೆದ ಆರೋಪದ ಮೇಲೆ ಯುವಕ ಹಾಗೂ ಯುವತಿನ್ನು ಬೆಳಗಾವಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ಕಿತ್ತೂರು ಬಳಿಯ ಅಂಬಡಗಟ್ಟಿ ಗ್ರಾಮದ ಮಹಾಬಲೇಶ್ ಕಾಮೋಜಿ (31) ಮತ್ತು ಸಿಮ್ರಾನ್ ಅಲಿಯಾಸ್ ಮುಸ್ಕಾನ್ (22) ಎಂದು ಗುರ್ತಿಸಲಾಗಿದೆ.

ಇಬ್ಬರೂ ಕಳೆದ ಮೂರು ವರ್ಷಗಳಿಂದ ಸಂಬಂಧದಲ್ಲಿದ್ದರು, ಇನ್ನು ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ, ವಿವಾಹಕ್ಕೂ ಮುನ್ನವೇ ಯುವತಿ ಗರ್ಭಣಿಯಾಗಿದ್ದು, ಮಾರ್ಚ್ 5 ರಂದು ಹೆರಿಗೆ ನೋವು ಕಾಣಿಸಿಕೊಂಡಿದೆ. ವೇಳೆ ತನ್ನ ವೇದನೆಯನ್ನು ಮಹಾಬಲೇಶ್ ಬಳಿ ಹೇಳಿಕೊಂಡಿದ್ದು, ಆತ ಹೇಳಿದಂತೆ ಮಗುವಿಗೆ ಜನ್ಮ ನೀಡಿದ್ದಾಳೆ.

ಬಳಿಕ ಮಗುವಿನ ಅಳುವಿನಿಂದ ಇತರರಿಗೆ ತಿಳಿಯುತ್ತದೆ ಎಂದು ಬಾಯಿ ಮೂಗು ಹಿಡಿದು ಡಬ್ಬದಲ್ಲಿ ಹಾಕಿದ್ದಾಳೆ. ವೇಳೆ ತಲೆಗೆ ಬಲವಾಗಿ ಪೆಟ್ಟು ಬಿದ್ದು ಮಗು ಸಾವನ್ನಪ್ಪಿದೆ. ಇದಾದ ಬಳಿಕ ಶಿಶುವನ್ನ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ತಿಪ್ಪೆಗೆಸದು ಇದಕ್ಕೂ ತನಗೂ ಸಂಬಂಧ ಇಲ್ಲ ಎನ್ನುವಂತೆ ಸ್ಥಳದಿಂದ ಕಾಲ್ಕಿತ್ತಿದ್ದಾಳೆ.

WhatsApp Group Join Now
Telegram Group Join Now
Share This Article
error: Content is protected !!