ಹುಬ್ಬಳ್ಳಿ: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ಅಭಿನಯಿಸಿದ ಯುಐ ಚಿತ್ರದ ಪ್ರಚಾರಕ್ಕಾಗಿ ಉಪೇಂದ್ರ ಹಾಗೂ ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್ ಅವರು ನಾಳೆ ಡಿ.೪ ರಂದು ಹುಬ್ಬಳ್ಳಿಗೆ ಆಗಮಿಸಲಿದ್ದಾರೆ ಎಂದು ಡಾ.ರಾಜಕುಮಾರ ಅಭಿಮಾನಿಗಳ ಸಂಘ ಹಾಗೂ ಸಂಗೊಳ್ಳಿ ರಾಯಣ್ಣಾ ಹಿತರಕ್ಷಣಾ ಸಮಿತಿ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ವಿಜಯಕುಮಾರ್ ಅಪ್ಪಾಜಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಅಂದು ಮುಂಜಾನೆ ೧೦ ಗಂಟೆಗೆ ಹುಬ್ಬಳ್ಳಿ ವಿದ್ಯಾನಗರದ ಬಿವಿಬಿ ಕಾಲೇಜಿನಲ್ಲಿ ಮಾದಕ ವ್ಯಸನ ಜಾಗೃತಿ ಅಭಿಯಾನ ನಂತರ ಶಿರೂರ ಪಾರ್ಕನ ತೋಳನಕೆರೆವರೆಗೆ ಹತ್ತಾರು ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಚಿತ್ರದ ಪ್ರಚಾರ ನಡೆಯಲಿದ್ದು, ಈ ಸಂದರ್ಭದಲ್ಲಿ ಉತ್ತರ ಕರ್ನಾಟಕದ ವಿವಿಧ ಜನಪರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಗದೀಶ್ ರಿತ್ತಿ, ರಾಜು ಜೋಸೆಫ್, ಸುನೀಲ್ ಮರಾಠೆ ಉಪಸ್ಥಿತರಿದ್ದರು.
ಸುಧೀರ್ ಕುಲಕರ್ಣಿ