ಬೆಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿ 26 ಜನರು ಬಲಿಯಾಗಿದ್ದು, ಕನ್ನಡಿಗರ ಮೃತದೇಹ ಇಂದು ಸಂಜೆ ಬೆಂಗಳೂರಿಗೆ ಬರಲಿದೆ.
ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಶಿವಮೊಗ್ಗ ಮೂಲದ ಮಂಜುನಾಥ್ ರಾವ್ ಹಾಗೂ ಹಾವೇರಿ ಮೂಲದ ಬೆಂಗಳೂರು ನಿವಾಸಿ ಭರತ್ ಭೂಷಣ್ ಮೃತಪಟ್ಟಿದ್ದಾರೆ.
ಕನ್ನಡಿಗರ ಮೃತದೇಹವನ್ನು ಜಮ್ಮು-ಕಾಶ್ಮೀರದಿಂದ ಬೆಂಗಳೂರಿಗೆ ತರಲು ವ್ಯವಸ್ಥೆ ಮಾಡಲಾಗಿದ್ದು, ಇಂದು ಸಂಜೆ 6 ಗಂಟೆಗೆ ಬೆಂಗಳೂರಿಗೆ ಬರಲಿದೆ.
ಭರತ್ ಮೃತದೇಹ ವಿಮಾನದಲ್ಲಿ ಇಂದು ಮಧ್ಯಾಹನ 3 ಗಂಟೆಗೆ ಮುಂಬೈ ಮಾರ್ಗವಾಗಿ ಬೆಂಗಳೂರುಗೆ ಬರಲಿದೆ. ಇಂದು ಸಂಜೆ 6 ಗಂಟೆಗೆ ಮಂಜುನಾಥ್ ಮೃತದೇಹ ದೆಹಲಿ ಮಾರ್ಗವಾಗಿ ಬೆಂಗಳೂರಿಗೆ ಬರಲಿದೆ. ಬಳಿಕ ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಮೃತ ಮಂಜುನಾಥ್ ಮೃತದೇಹವನ್ನು ಶಿವಮೊಗ್ಗಕ್ಕೆ ಸಾಗಿಸಲಾಗುತ್ತದೆ ಎಂದು ತಿಳಿದುಬಂದಿದೆ.