Ad imageAd image
- Advertisement -  - Advertisement -  - Advertisement - 

ಸದಲಗಾ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಿಗಾಗೆ ನೀರಿನ ಪ್ರಮಾಣ ಹೆಚ್ಚಾಗಿದ್ದು ಮುನ್ನೆಚ್ಚರಿಕೆಯಾಗಿ ಕ್ರಮ

Bharath Vaibhav
ಸದಲಗಾ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಿಗಾಗೆ ನೀರಿನ ಪ್ರಮಾಣ ಹೆಚ್ಚಾಗಿದ್ದು ಮುನ್ನೆಚ್ಚರಿಕೆಯಾಗಿ ಕ್ರಮ
WhatsApp Group Join Now
Telegram Group Join Now

ಚಿಕ್ಕೋಡಿ:-ಸದಲಗಾ ಪೊಲೀಸ್ ಸ್ಟೇಷನ್ PSI ಬಿರಾದಾರ ಸರ್, NDRF 10 ಬಟಾಲಿಯನ್ ಇನ್ಸಪೆ ಕ್ಟರ್ ಬಬ್ಲು ಬಿಸ್ವಾಸ್ ಸರ್, ಫೈರ್ ಬ್ರಿಗೇಡ್ ಸ್ಟೇಷನ್ ಇನ್ಸ್ಪೆಕ್ಟರ್ ಹನುಮಂತ್ ನರಗುಂದೆ ಸರ್, TMC ಚೀಫ್ ಆಫೀಸರ್ ಭೋಸಲೆ , ಫಾರೆಸ್ಟ್ ಡಿಪಾರ್ಟ್ಮೆಂಟ್ -ಡೆಪ್ಯೂಟಿ ರೇಂಜ್ ಫಾರೆಸ್ಟ್- ಶ್ರೀಶೈಲ್ ಭಾವನೆ ಸರ್, ರೆವೆನ್ಯೂ ಡಿಪಾರ್ಟ್ಮೆಂಟ್ – ರೆವೆನ್ಯೂ ಇನ್ಸ್ಪೆಕ್ಟರ್ – ಚಂದ್ರ ಶೇಖರ್ ಸರ್,ತಲಾಟಿ ಖೇಡಾ ಸರ್, ಸದಲಗಾ KEB ಡಿಪಾರ್ಟ್ಮೆಂಟ್ – ಲೈನಮನ್ ಕುಮಾರ ಲಕೋಲೆ ಹಾಗೂ ಸದಲಗಾದ ನಾಗರೀಕರಾದ ಅತಿಕ್ರಾಂತ ಪಾಟೀಲ, ಶಾಂತಿನಾಥ ಉಗಾರೆ, ಕೈಲಾಶ್ ಮಾಳಗೆ, ಅಣ್ಣಸಾಬ್ ಕದಮ, ತಾತ್ಯಾಸಾಬ್ ಕದಮ, ಸುಯೋಗ ಕಿಲ್ಲೆದಾರ್ ಮತ್ತು ಭೂಷಣ ಖೋತ್ ಇವರೆಲ್ಲರ ಸಂಯುಕ್ತ ಆಶ್ರಯದಲ್ಲಿ ಸದಲಗಾದ ಸುತ್ತ ಮುತ್ತ ಧೂಧ ಗಂಗಾ ಮತ್ತು ಕೃಷ್ಣಾ ನದಿಯಿಂದ ಪ್ರವಾಹ ಬರುವ ಸ್ಥಿತಿ  ನಿರ್ಮಾಣವಾಗಿದ್ದು, ಅದರ ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಸರ್ವೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪ್ರವಾಹ ಬರುವ ಸದಲಗಾದ ಸುತ್ತಮುತ್ತಲಿನ ಪ್ರದೇಶಗಲಾದ ಕಣಗಲೇ ಪ್ಲಾಟ್, ಬದ್ನಿಕಾಯಿ ಪ್ಲಾಟ್ ಮತ್ತು ಪಡಾರ ಮಡ್ಡಿ ಈ ಸ್ಥಳಗಳಿಗೆ ಈ ಮೇಲಿನ ಎಲ್ಲ ಅಧಿಕಾರಿಗಳು ಹಾಗೂ ಸದಲ ಗಾದ ನಾಗರೀಕರು ಭೇಟಿ ನೀಡಿ ಅಲ್ಲಿ ರುವ ಮಕ್ಕಳು, ವಯೋವೃದ್ಧರು, ಸ್ತೀಯರು ಹಾಗೂ ಎಲ್ಲ ಜನರಿಗೆ ಬೇಗನೆ ಸುರಕ್ಷಿತ ಸ್ಥಳಕ್ಕೆ ಹೋಗಿ ನೆಲೆಸಬೇಕೆಂದು ಮುನ್ನೆಚ್ಚರಿಕೆ ಕೊಡಲಾಯಿತು.

ಇದರ ಜೊತೆಗೆ ಮಕ್ಕಳ ಮಹತ್ವದ ಸರ್ಟಿಫಿಕೇಟ್ ಹಾಗೂ ಆಸ್ತಿಯ ದಾಖಲೆಗಳ್ಳನ್ನು ತಮ್ಮ ಜೊತೆ ಒಯ್ಯಬೇಕೆಂದು ತಿಳಿಸಲಾಯಿತು ಹಾಗೂ ದನ-ಕರುಗಳನ್ನು ಕೂಡ ಸುರಕ್ಷಿತ ಸ್ಥಳಕ್ಕೆ ಸಾಗಿಸಬೇಕೆಂದು ಕೋರಲಾಯಿತು.ಇಂತಹ ಪ್ರವಾಹ ಪೀಡಿತ ಸ್ಥಿತಿಯಲ್ಲಿ ಸದಲಗಾದ ಸಮಸ್ತ ನಾಗರಿಕರು ಒಗ್ಗಟ್ಟಾಗಿ ಮುನ್ನೆಚ್ಚರಿಕೆ ತೆಗೆದುಕೊಳ್ಳೋಣ.

ಸದಲಗಾ ಪಟ್ಟಣದ ಸುತ್ತ ಮುತ್ತ ದೂಧಗಂಗಾ ಹಾಗೂ ಕೃಷ್ಣಾ ನದಿ ಪ್ರವಾಹ ಪೀಡಿತ ಪ್ರದೇಶವಾಗಿದ್ದು, ಶಾಶ್ವತವಾದ NDRF ಬಟಾಲಿಯನನ್ನು ನಿಯೋಜನೆ ಮಾಡಬೇಕೆಂದು ಸರ್ಕಾರಕ್ಕೆ ಈ ಮೂಲಕ ಅತಿಕ್ರಾಂತ ಪಾಟೀಲ ಆದ ನಾನು ವೈಯಕ್ತಿಕವಾಗಿ ಹಾಗೂ ಸದಲಗಾದ ಸಮಸ್ತ ನಾಗರೀಕರ ಪರವಾಗಿ ಕೇಳಿಕೊಳ್ಳುತೇನೆ.

ವರದಿ :-ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!