ಗೋವಿಂದ ಕಾರಜೋಳ ಗೆಲುವು ಪಡೆಯುತ್ತಿದ್ದಂತೆ ,ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ.

Bharath Vaibhav
ಗೋವಿಂದ ಕಾರಜೋಳ ಗೆಲುವು ಪಡೆಯುತ್ತಿದ್ದಂತೆ ,ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ.
WhatsApp Group Join Now
Telegram Group Join Now

ಮೊಳಕಾಲ್ಮುರು:-ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಗಳಿಗೆ ವಾರೆಂಟಿ ಇಲ್ಲ ಎನ್ನುವುದಕ್ಕೆ ಗೋವಿಂದ ಕಾರಜೋಳ ವಿಜಯಮಾಲೆಯೇ ಸಾಕ್ಷಿ ಎಂದು ಮಂಡಲ ಅಧ್ಯಕ್ಷರಾದ ಡಾ.ಪಿ ಎಂ ಮಂಜುನಾಥ್ ರವರು ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ ಬಿಜೆಪಿ ಪಕ್ಷದ ಚಿತ್ರದುರ್ಗ ಲೋಕಸಭಾ ಫಲಿತಾಂಶ ಗೋವಿಂದ ಕಾರಜೋಳ ಅವರಿಗೆ ವಿಜಯಮಾಲೆ ಪಡೆಯುತ್ತಿದ್ದಂತೆ ಬಿಜೆಪಿ ಪಕ್ಷದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ಪಟಾಕಿ ಸೇರಿಸಿ ಸಂಭ್ರಮಾಚರಣೆ ಮಾಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ.

ಬಿಜೆಪಿ ಕಾರ್ಯಕರ್ತರಿಗೆ ಮೊದಲನೇದಾಗಿ ಧನ್ಯವಾದಗಳು ಇತಿಹಾಸದಲ್ಲಿ ಎರಡನೇ ಬಾರಿ ಬಿಜೆಪಿ ಜಯಭೇರಿ ಬಾರಿಸಿರುವುದು ಇದೆ ಮೊದಲು ಮೋದಿ ಸರ್ಕಾರದ ಉತ್ತಮ ಆಡಳಿತಕ್ಕೆ ಜನ ಬೆಂಬಲಿಸಿದ್ದಾರೆ.

ಗೋವಿಂದ ಕಾರಜೋಳ ಗೆದ್ದ ನಂತರ ಈ ಭಾಗದ ನೀರಿನ ಸಮಸ್ಯೆ ಭದ್ರಾ ಮೇಲ್ದಂಡೆ ಯೋಜನೆ. ಇನ್ನು ಅನೇಕ ಯೋಜನೆಗಳು ತಂದು ಚಿತ್ರದುರ್ಗ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲು ಪ್ರಯತ್ನ ಪಡುತ್ತಾರೆ ಎಂದರು.
ಈ ಸಂದರ್ಭದಲ್ಲಿ ಚಿತ್ರದುರ್ಗದಲ್ಲಿ ಗೋವಿಂದ ಕಾರಜೋಳ ಮಾತನಾಡಿ ನಾನು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಲ್ಲಾ ಮತದಾರ ಪ್ರಭುಗಳಿಗೆ ಧನ್ಯವಾದಗಳು ತಿಳಿಸಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಡಾ. ಬಿ ಮಂಜುನಾಥ್, ನಗರದ ಅಧ್ಯಕ್ಷರಾದ ಕಿರಣ್ ಗಾಯಕ್ವಾಡ್, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷರಾದ ಲಕ್ಷ್ಮಣ್ ರವಿಕುಮಾರ್ ಮಾಜಿ ಉಪಾಧ್ಯಕ್ಷರಾದ ಎಂ ಎನ್ ಮಂಜಣ್ಣ ಸದಸ್ಯಗಳಾದ ತಿಪ್ಪೇಸ್ವಾಮಿ, ರೂಪ ವಿನಯ್ ಕುಮಾರ್ ಶುಭ ಪೃಥ್ವಿರಾಜ್, ಸಿದ್ದಣ್ಣ ರಾಮಾಂಜನಿ, ಇನ್ನು ಹಲವರು ಉಪಸ್ಥಿತರಿದ್ದರು.

ವರದಿ ಪಿಎಂ ಗಂಗಾಧರ

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!