Ad imageAd image

ಸೂರ್ಯ-ಚಂದ್ರರಿರುವುದು ಎಷ್ಟು ಸತ್ಯವೋ; 2028 ರಲ್ಲೂ ರಾಜು ಕಾಗೆಯವರೆ ನಮ್ಮ ನಾಯಕರು ಅನ್ನುವುದು ಅಷ್ಟೇ ಸತ್ಯ

Bharath Vaibhav
ಸೂರ್ಯ-ಚಂದ್ರರಿರುವುದು ಎಷ್ಟು ಸತ್ಯವೋ; 2028 ರಲ್ಲೂ ರಾಜು ಕಾಗೆಯವರೆ ನಮ್ಮ ನಾಯಕರು ಅನ್ನುವುದು ಅಷ್ಟೇ ಸತ್ಯ
WhatsApp Group Join Now
Telegram Group Join Now

ಕಾಗವಾಡ : ಕ್ಷೇತ್ರದ ಸಾಮಾಜಿಕ ಜಾಲತಾಣ ಸಂಚಾಲಕ, ಸಂಭಾಜಿ ವಾಗ್ಮೋಡೆ ಅವರು 2028ರ ಚುನಾವಣೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

2028ರ ಚುನಾವಣೆಯಲ್ಲಿ ರಾಜು ಕಾಗೆ ಅವರ ಬದಲಿಗೆ ಚಿದಾನಂದ ಸವದಿ ಅವರು ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಕೇವಲ ಊಹಾಪೋಹ ಎಂದು ಸಂಭಾಜಿ ಅವರು ಹೇಳಿದ್ದಾರೆ.

ರಾಜು ಕಾಗೆ ಅವರು ಕ್ಷೇತ್ರದಲ್ಲಿ ಕೈಗೊಂಡ ಬಸವೇಶ್ವರ ಏತ ನೀರಾವರಿ ಯೋಜನೆ, ಬಸ್ ಸೌಕರ್ಯ ಮತ್ತು ಸಮುದಾಯ ಭವನಗಳಂತಹ ಜನಪದ ಕೆಲಸಗಳನ್ನು ವಾಗ್ಮೋಡೆ ಶ್ಲಾಘಿಸಿದ್ದಾರೆ.

ರಾಜು ಕಾಗೆ ಮತ್ತು ಲಕ್ಷ್ಮಣ ಸವದಿ ಅವರು ರಾಮ-ಲಕ್ಷ್ಮಣರಂತೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಮತ್ತು ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜನರ ಗೊಂದಲ ಬಗೆಹರಿಸಲು ಈ ವೀಡಿಯೊ ಮಾಡಲಾಗಿದ್ದು, ಇಂತಹ ಸುಳ್ಳು ಸುದ್ದಿಗಳನ್ನ ಹರಡುವುದನ್ನ ನಿಲ್ಲಿಸಬೇಕು ಎಂದು ವಿನಂತಿಸಿದ್ದಾರೆ.

ವರದಿ : ಪ್ರಲ್ಹಾದ ವಾಘಮೋರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!