ತುರುವೇಕೆರೆ : ತಾಲ್ಲೂಕಿನ ದಬ್ಬೇಘಟ್ಟ ಗ್ರಾಮದ ಶ್ರೀ ಚನ್ನಕೇಶವಸ್ವಾಮಿ ಗೆಳೆಯರ ಬಳಗದಿಂದ ಆಗಸ್ಟ್ 26 ರಿಂದ 28 ರವರೆಗೆ ಶ್ರೀ ಗಣಪತಿ ವಿಸರ್ಜನಾ ಮಹೋತ್ಸವವನ್ನು ಏರ್ಪಡಿಸಲಾಗಿದೆ.
ವಿಸರ್ಜನಾ ಮಹೋತ್ಸವದ ಅಂಗವಾಗಿ ಆಗಸ್ಟ್ 26 ರಂದು ರಾತ್ರಿ ವಿಶೇಷ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಏರ್ಪಡಿಸಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ ಜೋಡಿ ಟಗರು, ಎರಡನೇ ಬಹುಮಾನವಾಗಿ ಎಂಟು ಸಾವಿರ ರೂ, ತೃತೀಯ ಬಹುಮಾನವಾಗಿ ಐದು ಸಾವಿರ ರೂ, ನಾಲ್ಕನೇ ಬಹುಮಾನವಾಗಿ ಮೂರು ಸಾವಿರ ರೂ ನಿಗದಿಪಡಿಸಿದ್ದು, ಪ್ರತಿಯೊಂದು ಬಹುಮಾನದ ಜೊತೆಗ ಆಕರ್ಷಕ ಪಾರಿತೋಷಕವನ್ನು ಸಹ ನೀಡಲಾಗುವುದು. ಹಗ್ಗ ಜಗ್ಗಾಟ ಸ್ಪರ್ಧೆಗೆ 300 ರೂ ಪ್ರವೇಶ ಶುಲ್ಕ ನಿಗದಿಪಡಿಸಿದ್ದು, ಒಂದು ತಂಡದಲ್ಲಿ ಏಳು ಮಂದಿಗೆ ಮಾತ್ರ ಅವಕಾಶವಿದೆ. ಆಸಕ್ತರು 7760788240, 8152052315 ಗೆ ಸಂಪರ್ಕಿಸಲು ಕೋರಿದೆ.
ಆಗಸ್ಟ್ 27 ರಂದು ಬುಧವಾರ ರಾತ್ರಿ 9 ಗಂಟೆಗೆ ನಡೆಯುವ ಧಾರ್ಮಿಕ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಂ.ಟಿ.ಕೃಷ್ಣಪ್ಪ ವಹಿಸಲಿದ್ದು, ಮಾಜಿ ಶಾಸಕ ಮಸಾಲಾ ಜಯರಾಮ್ ಉದ್ಘಾಟಿಸಲಿದ್ದಾರೆ. ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಶ್ರೀ ಚನ್ನಕೇಶವ ಗೆಳೆಯರ ಬಳಗದ ಉದ್ಘಾಟನೆಯನ್ನು ವಕೀಲ ಸುದೀಪ್, ಡಿ.ಎನ್.ವಿಶ್ವನಾಥ್ ನೆರವೇರಿಸಲಿದ್ದಾರೆ. ಆಗಸ್ಟ್ 28 ರಂದು ಗುರುವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೂವಿನ ಪಲ್ಲಕ್ಕಿಯಲ್ಲಿ ಗಣಪತಿಯನ್ನು ಮೆರವಣಿಗೆ ನಡೆಸಿ ವಿಸರ್ಜನೆ ನಡೆಸಲಾಗುವುದು. ನಂತರ ಭಕ್ತಾಧಿಗಳಿಗೆ ಪ್ರಸಾದ ವಿತರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ವರದಿ : ಗಿರೀಶ್ ಕೆ ಭಟ್




