ಚಿಕ್ಕೋಡಿ : ಇಂದು ಮಹಾವೀರ ಜಯಂತಿಯ ಪವಿತ್ರ ಸಂದರ್ಭದಲ್ಲಿ ಸದಲಗಾ ಪಟ್ಟಣದ ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಗಣೇಶ ಅಣ್ಣಾ ಹುಕ್ಕೇರಿ ಅವರು ಭಾಗವಹಿಸಿದರು.
ಆಧ್ಯಾತ್ಮಿಕತೆಯ, ಅಹಿಂಸೆ ಮತ್ತು ಸತ್ಯಧರ್ಮದ ಪ್ರೇರಣೆಯೊಂದಿಗೆ, ಭಗವಾನ್ ಮಹಾವೀರರ ಬೋಧನೆಗಳನ್ನು ಸ್ಮರಿಸುತ್ತಾ ನಮನ ಸಲ್ಲಿಸಲಾಯಿತು.
ಅವರ ಉಪದೇಶಗಳು ಇಂದು ಕೂಡ ಮಾನವ ಸಮಾಜಕ್ಕೆ ಶಾಶ್ವತ ದಾರಿದೀಪವಾಗಿ ಉಳಿದಿವೆ.
ಈ ಸಂದರ್ಭದಲ್ಲಿ ಸಮಾಜದ ಗಣ್ಯ ವ್ಯಕ್ತಿಗಳು, ಪುರಸಭೆ ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ