Mk ಹುಬ್ಬಳ್ಳಿ:- ಕ್ಷೇತ್ರದ Mk ಹುಬ್ಬಳ್ಳಿಯಿಂದ ಪಾರಿಶ್ವಾಡ ಸಂಪರ್ಕಿಸುವ pwd ರಸ್ತೆಯಲ್ಲಿರುವ ದೊಡ್ಡ ದೊಡ್ಡ ತಗ್ಗು ಗುಂಡಿಗಳೇ ಪ್ರಯಾಣಿಕರಿಗೆ ಕಂಟಕ ಎಂಬ ವರದಿಯನ್ನು ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ತಯಾರಿಸಿ ಲೋಕೋಪಯೋಗಿ ಇಲಾಖೆಯ ಉತ್ತರ ವಲಯದ ಮುಖ್ಯ ಇಂಜಿನಿಯರ್ ಸುರೇಶ್
ಅವರ ಗಮನಕ್ಕೆ ತೆಗೆದುಕೊಂಡು ಬಂದು ಬೆಳಕು ಚೆಲ್ಲುವ ಕೆಲಸ ಮಾಡಿದ್ದರು.
ಸದರಿ ಈ ವರದಿಗೆ ಎಚ್ಚೆತ್ತು ಮುಖ್ಯ ಅಭಿಯಂತರ ಸುರೇಶ್ ಅವರ ಸಲಹೆ ಮೇರೆಗೆ ಬೆಳಗಾವಿ ಕಾರ್ಯ ವಾಹಕ ಅಭಿಯಂತರರು ಆದ ಎಸ್.ಎಸ್ ಸೊಬರದ್ ಹಾಗೂ ಕಿತ್ತೂರು ಉಪ ವಿಭಾಗದ ಸಹಾಯಕ ಕಾರ್ಯವಾಹಕ ಅಭಿಯಂತರ ಸಂಜು ಮಿರಜ್ ಕರ್ ರವರು ತಗ್ಗು ಗುಂಡಿಗಳಿಂದ ಹದಗೆಟ್ಟ pwd ರಸ್ತೆಗೆ ಕಾಯಕಲ್ಪ ನೀಡಿ ಇಂದು ತಗ್ಗು ಗುಂಡಿಗಳನ್ನು ಮುಚ್ಚಿಸಿ ವಾಹನಗಳು ಮತ್ತು ಪ್ರಯಾಣಿಕರು ಸರಾಗವಾಗಿ ಸಂಚಾರ ಮಾಡುವುದಕ್ಕೆ ಅನುವು ಮಾಡಿಕೊಟ್ಟು ದಿಟ್ಟತನ ಮೆರೆದಿದ್ದಾರೆ. ಇನ್ನೂ ಈ ವರದಿ ಬೆಳಕು ಚೆಲ್ಲಿದ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಹಾಗೂ pwd ಇಂಜಿನಿಯರ್ಸ್ ಗಳಿಗೆ ವಾಹನ ಸವಾರರು ಧನ್ಯವಾದಗಳನ್ನು ತಿಳಿಸಿದ್ದಾರೆ.
ವರದಿ:- ಬಸವರಾಜು.