ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ತಾಲೂಕ್ ಪಂಚಾಯತ್ ಸಭಾಭವನದಲ್ಲಿ ಇಂದುರಾಮದುರ್ಗ ತಾಲೂಕಿನ ಹೀರೆಕ್ಕೊಪ್ಪ ಕೆ. ಎಸ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಚಿಕ್ಕೊಪ್ಪ ಕೆ ಎಸ್ ಹೀರೆಕೊಪ್ಪ ಕೆ ಎಸ್ ಹಾಗೂ ಭಾಗೋಜಿಕೊಪ್ಪ ಗ್ರಾಮದ ಒಟ್ಟು 149 ಫಲಾನುಭವಿಗಳಿಗೆ ನಮ್ಮ ಭೂಮಿ ನಮ್ಮ ತೋಟ ಭೂ ರಹಿತ ಕೃಷಿ ಕಾರ್ಮಿಕರ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ 2.5ಗುಂಟೆ ಭೂಮಿಯನ್ನು-14-08-2 014ರಲ್ಲಿ ಹಕ್ಕುಪತ್ರ ವಿತರಣೆ ಮಾಡಿದರು.
ಆದರೆ ಹಲವಾರು ಕಾರಣಾಂತರಗಳಿಂದ ಆ ಭೂಮಿಯನ್ನು ಇನ್ನು ಹಂಚಿಕೆ ಮಾಡಿರಲಿಲ್ಲ ಆದಕಾರಣ ಎಲ್ಲಾ ಫಲಾನುಭವಿಗಳು ಕುಡಿ ಸ್ಥಳೀಯ ಶಾಸಕರ ಬಳಿಗೆ ಹೋಗಿ ಮನವಿ ಮಾಡಿಕೊಂಡರು ನಂತರ ಶಾಸಕರು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಸಭೇ ನಡಿಸಿ ಇನ್ನೂ ಒಂದು ತಿಂಗಳಲ್ಲಿ ನಿಮಗೆ 2.5ಗುಂಟೆ ಭೂಮಿಯನ್ನು ಅಳೆದು ಕೊಡಲು ನಾನು ಅಧಿಕಾರಿಗಳ ಜೊತೆಗೂಡಿ ಅವರಿಗೆ ಮನವಿ ಮಾಡುತ್ತೇನೆ ಅಂತ ಎಲ್ಲಾ ಫಲಾನುಭವಿಗಳಿಗೆ ಹೇಳಿದರು.
ಅದರಿಂದ ಎಲ್ಲ ಪಲಾನುಭವಿಗಳು ಕರ್ನಾಟಕ ಸರ್ಕಾರದ ಮುಖ್ಯ ಸಚೇತಕರು ಹಾಗೂ ಶಾಸಕರಾದ ಅಶೋಕ್ ಪಟ್ಟಣ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ತಹಶೀಲ್ದಾರರಾದ ಪ್ರಕಾಶ್ ಹೊಳೆಪ್ಪಗೋಳ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್ ಐನಾಪುರ, ಭೂ ಇಲಾಖೆಯ ಅಧಿಕಾರಿಯಾದ ತುಳಸಿಗರೆ, ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ- ಶ್ರೀ ಸಣ್ಣಪ್ಪ ದುಂಡಪ್ಪ ಸನದಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ದೇವರೆಡ್ಡಿ, ಮತ್ತು ಸದಸ್ಯರಾದ ಶ್ರೀ ಮಲ್ಲಿಕಾರ್ಜುನ ಇಂಗಳಗಿ, ಹಾಗೂ ಫಕ್ರುಸಾಬ ದಬಾಡಿ, ಮತ್ತು ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವರದಿ: ಮಂಜುನಾಥ ಕಲಾದಗಿ




