Ad imageAd image

ಚೊಚ್ಚಲ ಪಂದ್ಯದಲ್ಲೇ ನಾಲ್ಕು ವಿಕೆಟ್ ಅಶ್ವಿನ್ ಕುಮಾರ್ ದಾಖಲೆ

Bharath Vaibhav
ಚೊಚ್ಚಲ ಪಂದ್ಯದಲ್ಲೇ ನಾಲ್ಕು ವಿಕೆಟ್ ಅಶ್ವಿನ್ ಕುಮಾರ್ ದಾಖಲೆ
WhatsApp Group Join Now
Telegram Group Join Now

ಹೈದರಾಬಾದ್​: ಐಪಿಎಲ್​ನ 12ನೇ ಪಂದ್ಯ ಸೋಮವಾರ ನಡೆಯಿತು. ಇದರಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಮತ್ತು ಮುಂಬೈ ಇಂಡಿಯನ್ಸ್​ ತಂಡಗಳು ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ ಮುಂಬೈ ತಂಡ 8 ವಿಕೆಟ್​ಗಳಿಂದ ಗೆಲುವು ಸಾಧಿಸಿ ಗೆಲುವಿನ ಖಾತೆ ತೆರೆದಿದೆ.

ವಾಂಖೆಡೆ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ್ದ ಕೆಕೆಆರ್​ ತಂಡದ ಮೇಲೆ ಮುಂಬೈ ಬೌಲರ್​ಗಳು ಸವಾರಿ ಮಾಡಿದರು. ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿ ಆದರು. ಕೆಕೆಆರ್​ ತಂಡ 116 ರನ್​ಗಳಿಗೆ ಸರ್ವಪತನ ಕಂಡಿತು. ಈ ಗುರಿಯನ್ನು ಬೆನ್ನತ್ತಿದ ಮುಂಬೈ ತಂಡ ರಯಾನ್​ ರಿಕಲ್ಟನ್​ ಅವರ ಭರ್ಜರಿ ಬ್ಯಾಟಿಂಗ್​ ಪ್ರದರ್ಶನದಿಂದಾಗಿ 12.5 ಓವರ್​ಗಳಲ್ಲೇ 2 ವಿಕೆಟ್​ ಕಳೆದುಕೊಂಡು ಸುಲಭವಾಗಿ ಗೆಲುವಿನ ದಡ ಸೇರಿಕೊಂಡಿತು. ಆದರೆ ಈ ಪಂದ್ಯದ ಗೆಲುವಿನಲ್ಲಿ ಯುವ ಬೌಲರ್​ ಪ್ರಮುಖ ಪಾತ್ರ ವಹಿಸಿದ್ದಾರೆ.

ಅಶ್ವನಿ ಕುಮಾರ್ಘರ್ಜನೆಗೆ ಕೆಕೆಆರ್ಸೈಲೆಂಟ್​: ಮುಂಬೈ ಪರ ಬೌಲಿಂಗ್​ ಮಾಡಿದ ಯುವ ವೇಗಿ ಅಶ್ವನಿ ಕುಮಾರ್​ ಕೆಕೆಆರ್​ ತಂಡದ ನಾಲ್ವರು ಬಲಿಷ್ಠ ಆಟಗಾರರ ವಿಕೆಟ್​ ಉರುಳಿಸುವಲ್ಲಿ ಯಶಸ್ವಿ ಆದರು. 3 ಓವರ್​ ಬೌಲ್​ ಮಾಡಿದ ಅಶ್ವನಿ 24 ರನ್​ ನೀಡಿ ಅಜಿಂಕ್ಯಾ ರಹಾನೆ, ರಿಂಕು ಸಿಂಗ್​​, ಮನಿಶ್​ ಪಾಂಡೆ, ರಸೆಲ್​ ವಿಕೆಟ್​ಗಳನ್ನು ಉರುಳಿಸಿದರು. ಇದರೊಂದಿಗೆ ಐಪಿಎಲ್​ನಲ್ಲಿ ದೊಡ್ಡ ದಾಖಲೆ ಬರೆದಿದ್ದಾರೆ.

ಇತಿಹಾಸ ಸೃಷ್ಟಿಸಿದ ಅಶ್ವನಿ ಕುಮಾರ್​: ಐಪಿಎಲ್​ ಪಾದಾರ್ಪಣೆ ಪಂದ್ಯದಲ್ಲೇ 4 ವಿಕೆಟ್​ ಪಡೆಯುವ ಮೂಲಕ ಅಶ್ವನಿ ಕುಮಾರ್​ ಇತಿಹಾಸ ಸೃಷ್ಟಿಸಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್​ ಎನಿಸಿಕೊಂಡಿದ್ದಾರೆ. ಅಲ್ಲದೆ ಐಪಿಎಲ್​ ಡೆಬ್ಯೂ ಪಂದ್ಯದಲ್ಲೇ ಅತಿ ಹೆಚ್ಚು ವಿಕೆಟ್​ ಪಡೆದ ಒಟ್ಟಾರೆ ಎರಡನೇ ಬೌಲರ್​ ಎನಿಸಿಕೊಂಡಿದ್ದಾರೆ. ಈ ಪಟ್ಟಯಲ್ಲಿ ಅಲ್ಜಾರಿ ಜೋಸೆಫ್ ಮೊದಲ ಸ್ಥಾನದಲ್ಲಿದ್ದಾರೆ. ಇವರು ಐಪಿಎಲ್​ ಪಾದಾರ್ಪಣೆ ಪಂದ್ಯದಲ್ಲಿ 6 ವಿಕೆಟ್​ಗಳನ್ನು ಪಡೆದಿದ್ದರು.

WhatsApp Group Join Now
Telegram Group Join Now
Share This Article
error: Content is protected !!