ಬೆಂಗಳೂರು : ಕಳೆದ 112 ದಿನಗಳ ಕಾಲ ಕಿರುತೆರೆ ವೀಕ್ಷಕರಿಗೆ ನಿರಂತರ ಮನರಂಜನೆ ನೀಡುತ್ತಾ ಚರ್ಚೆಯ ಒಂದು ವಿಷಯವಾಗಿ ಮಾರ್ಪಟ್ಟಿದ್ದ ಬಿಗ್‌ಬಾಸ್ ಕನ್ನಡ ಸೀಸನ್ 12ಕ್ಕೆ ಇಂದು ( ಜನವರಿ 18 ) ತೆರೆ ಬಿದ್ದಿದೆ.
ಫಿನಾಲೆಗೆ ಪ್ರವೇಶಿಸಿದ್ದ ಆರು ಸ್ಪರ್ಧಿಗಳ ಪೈಕಿ ಮೊದಲಿಗೆ ಧನುಷ್ ಎಲಿಮಿನೇಟ್ ಆಗಿ ಆರನೇ ಸ್ಥಾನ ಪಡೆದುಕೊಂಡರೆ, ಮ್ಯೂಟೆಂಟ್ ರಘು ಐದನೇ ಸ್ಥಾನ, ಕಾವ್ಯ ನಾಲ್ಕನೇ ಸ್ಥಾನ ಪಡೆದುಕೊಂಡರು.
ಅಂತಿಮವಾಗಿ ಉಳಿದ ಮೂವರು ಸ್ಪರ್ಧಿಗಳನ್ನು ವೇದಿಕೆಗೆ ಕರೆತಂದು ಗಿಲ್ಲಿ ಹಾಗೂ ರಕ್ಷಿತಾ ಟಾಪ್ 2 ಎಂದು ಘೋಷಿಸಲಾಯಿತು. ಅಶ್ವಿನಿ ಗೌಡ ಮೂರನೇ ಸ್ಥಾನ ಪಡೆದುಕೊಂಡರು.
ಕೊನೆಗೆ ಒಂದೆಡೆ ಗಿಲ್ಲಿ ಕೈಹಿಡಿದು ಮತ್ತೊಂದೆಡೆ ರಕ್ಷಿತಾ ಕೈ ಹಿಡಿದ ಸುದೀಪ್ ಗಿಲ್ಲಿ ನಟ ವಿನ್ನರ್ ಎಂದು ಘೋಷಿಸುವ ಮೂಲಕ ಬಹು ದೊಡ್ಡ ಪ್ರಶ್ನೆ ಹಾಗೂ ಕುತೂಹಲಕ್ಕೆ ಪೂರ್ಣ ವಿರಾಮವಿಟ್ಟರು.




