ಹುಬ್ಬಳ್ಳಿ: -ಹಳೇ ಕೋರ್ಟ್ ಬಳಿಯಲ್ಲಿ ತೆರಳುತ್ತಿದ್ದಾಗ ಪ್ಲೈಓವರ್ ಕಾಮಗಾರಿಯ ಕಬ್ಬಿಣದ ರಾಡ್ ತಲೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಎಎಸ್‌ಐ ನಾಭಿರಾಜ್ ದಯಣ್ಣವರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ಪ್ಲೈಓವರ್ ಕಾಮಗಾರಿ ನಡೆಸುವ ವೇಳೆ ನಿರ್ಲಕ್ಷ್ಯ ವಹಿಸಿದ ಝಂಡು ಕನ್ಸಕ್ಷನ್ ಕಂಪನಿಯ ಸುಪರವೈಸರ್, ಲೈಜನಿಂಗ್ ಇಂಜನೀಯರ್, ಇಂಜನೀಯರ್ ಮತ್ತು ನೌಕರರು ಸೇರಿ ೧೧ ಜನರನ್ನು ಉಪನಗರ ಪೊಲೀಸರು ಬಂಧಿಸಿದ್ದಾರೆ.
ಕಳೆದ ಸೆ.೧೦ ರಂದು ಭದ್ರತಾ ಕರ್ತವ್ಯ ನಿರ್ವಹಿಸಿ ಠಾಣೆಗೆ ತೆರಳುತ್ತಿದ್ದ ವೇಳೆ ನಾಭಿರಾಜ್ ದಯಣ್ಣವರ ಮೇಲೆ ಕೋರ್ಟ್ ವೃತ್ತದ ಬಳಿಯ ಪ್ಲೈಓವರ್ ಕಾಮಗಾರಿ ಸ್ಥಳದಲ್ಲಿ ಮೇಲಿನಿಂದ ಕಬ್ಬಿಣದ ರಾಡ್ ಬಿದ್ದಿತ್ತು.
ಕಾಮಗಾರಿಯನ್ನು ಮಾಡುತ್ತಿರುವ ಜಂಡು ಕನ್ಸಟ್ರಕ್ಷನ್ ಕಂಪನಿಯ ನೌಕರರು ಕಾಮಗಾರಿ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಇದ್ದುದರಿಂದ ಸೇತುವೆ ಮೇಲೆ ಕಬ್ಬಿಣದ ಬಾರಗಳನ್ನು ಸಾಗಿಸುತ್ತಿದ್ದ ನೌಕರರ ನಿರ್ಲಕ್ಷತನದಿಂದ ಘಟನೆ ಸಂಭವಿಸಿದ ಹಿನ್ನೆಲೆಯಲ್ಲಿ ೧೧ ಜನರನ್ನು ಬಂಧಿಸಲಾಗಿದೆ.
ಹರ್ಷಾ ಶಿವಾನಂದ ಹೊಸಗಾಣಿಗೇರ (ಸುಪ್ರವೈಜರ್), ಜಿತೇಂದ್ರಪಾಲ ಶರ್ಮಾ ಶ್ರೀ ದೇವಕೃಷ್ಣ (ಲೈಜನಿಂಗ್ ಇಂಜನೀಯರ್), ಭೂಪೇಂದರ್ ಪಾಲ್ ಮಹಾರಾಜಸಿಂಗ್ (ಇಂಜನೀಯರ್), ಅಸ್ಲಂ ಅಲಿ ಜಲೀಲಮಿಯಾ ( ಕ್ರೇನ್ ಚಾಲಕ), ಸಿಬ್ಬಂದಿಗಳಾದ ಮೊಹಮ್ಮದ ಇಮಾದರೂ ಸಹರುಲ್ ಮಿಯಾ,
ಮೊಹಮ್ಮದ ಮಸೂದರ ರೆಹಮಾನ ಮೆಹಮೂದ್ದೀನ ಹಾಜಿ, ಸಬೀಬ ಶೇಖ ಮನ್ಸೂರಆಲಿ, ರಿಜಾವುಲ್ ಹಕ್ ಮಂಜೂರಅಲಿ , ಶಮೀಮ ಶೇಖ ತಂದೆ ಪಿಂಟು ಶೇಖ,
ಮೊಹಮ್ಮದ ಆರೀಫ ತಂದೆ ಖಯೂಮ ಮತ್ತು ಕಾರ್ಮಿಕ ಗುತ್ತಿಗೆದಾರ ಮೊಹಮ್ಮದ ರಬಿವುಲ್ ಹಕ್ ಮಜಬೂರ ರಹಿಮಾನ ಇವರುಗಳನ್ನು ಬಂಧಿಸಲಾಗಿದೆ.
ಸುಧೀರ್ ಕುಲಕರ್ಣಿ ಬಿ ವಿ ನ್ಯೂ ಜ ಹುಬ್ಬಳ್ಳಿ