Ad imageAd image

ಎಎಸ್‌ಐ ಎಲ್.ಎಸ್. ರಾಠೋಡ್  ಅವರ  ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು  ಪಿಎಸ್‌ಐ ಸೋಮೇಶ ಗೆಜ್ಜಿ ಅವರಿಗೆ ಮನವಿ

Bharath Vaibhav
ಎಎಸ್‌ಐ ಎಲ್.ಎಸ್. ರಾಠೋಡ್  ಅವರ  ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು  ಪಿಎಸ್‌ಐ ಸೋಮೇಶ ಗೆಜ್ಜಿ ಅವರಿಗೆ ಮನವಿ
WhatsApp Group Join Now
Telegram Group Join Now

ಚಡಚಣ :  ಸಮೀಪದ ದೇವರ ನಿಂಬರಗಿ ಗ್ರಾಮದ  ದಲಿತ ವ್ಯಕ್ತಿಯ ಮೇಲೆ  ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಚಡಚಣ ಪೊಲೀಸ್ ಠಾಣೆಯ ಎಎಸ್‌ಐ ಎಲ್.ಎಸ್. ರಾಠೋಡ್  ಅವರ  ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು  ಆಗ್ರಹಿಸಿ ದಲಿತ ಮುಖಂಡರು ಗುರವಾರ ಪಿಎಸ್‌ಐ ಸೋಮೇಶ ಗೆಜ್ಜಿ ಅವರಿಗೆ ಮನವಿ ಸಲ್ಲಿಸಿದರು.

ದಲಿತ ವ್ಯಕ್ತಿಗೆ ಹಲ್ಲೆ, ಜಾತಿ ನಿಂದನೆ ಆರೋಪ:

ಎಎಸ್‌ಐ ವಿರುದ್ಧ ಕ್ರಮಕ್ಕೆ ದಲಿತ ಮುಖಂಡರ ಆಗ್ರಹ

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಸಮೀಪದ ದೇವರ ನಿಂಬರಗಿ ಗ್ರಾಮದ  ದಲಿತ ವ್ಯಕ್ತಿಯ ಮೇಲೆ ಮಾರ್ಚ್ 11 ರಂದು ಸಾರ್ವಜನಿಕವಾಗಿ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಚಡಚಣ ಪೊಲೀಸ್ ಠಾಣೆಯ ಎಎಸ್‌ಐ ಎಲ್.ಎಸ್. ರಾಠೋಡ್ ಅವರನ್ನು ಅಮಾನತ್ತುಗೊಳಿಸಿ ಅವರ  ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಲಿತ ಮುಖಂಡರು ಗುರವಾರ ತಹಸಿಲ್ದಾರ ಹಾಗು ಪಿಎಸ್‌ಐ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡ ದಶರಥ ಬನಸೋಡೆ,ಆರೋಪಿತ ಅಧಿಕಾರಿ ಕಾನುನು ಅರಿವು ಮೂಡಿವವರು ಹಾಗೂ ಪಾಲಿಸುವವರಾಗಿದ್ದು,ಅವರೇ ಕಾನುನನ್ನು ಗಾಳಿಗೆ ತೂರಿ ಅಮಾಯಕ ದಲಿತ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ.ಇವರ ಮೇಲೆ   ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ  ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಮುಖಂಡ ಪರಮೇಶ್ವರ ಸಿಂಗೆ  ಮಾತನಾಡಿ,ಇಂತಹ ಘಟನೆಗಳು ಸಮಾಜದಲ್ಲಿ ಅಸಮಾಧಾನ ಮತ್ತು ಭಯದ ವಾತಾವರಣವನ್ನು ಸೃಷ್ಟಿಸುತ್ತವೆ  ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದ ಅವರು,ಕೂಡಲೇ ಆಪಾದಿತ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುವದು ಅನಿವಾರ್ಯವಾಗುತ್ತದೆ ಎಂದರು.

ಈ ಸಂಧರ್ಭದಲ್ಲಿ ದಲಿತ ಮುಖಂಡರಾದ  ಧರ್ಮಣ್ಣ ಬನಸೊಡೆ ,ನಾರಾಯಣ ವಾಘಮೋರೆ, ಪ್ರಕಾಶ ಬನಸೋಡೆ, ಶಶಿಕುಮಾರ ಸಿಂಗೆ, ರಾವಲ ಬನಸೋಡೆ, ಸಿದ್ದರಾಯ ಬನಸೋಡೆ, ನೀತಿನ ಬನಸೋಡೆ, ಚೆನ್ನು ಗಾಡಿವಡ್ಡರ ಉಪಸ್ಥಿತರಿದ್ದರು.

ವರದಿ : ಎಸ್.ಎಸ್.ಬಗಲಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!