ಅಬುದಾಬಿ: ಕುಶಾಲ್ ಮೆಂಡಿಸ್ ಅವರ ಅಜೇಯ ಅರ್ಧ ಶತಕದ ನೆರವಿನಿಂದ ಶ್ರೀಲಂಕಾ ಕ್ರಿಕೆಟ್ ತಂಡವು ಇಲ್ಲಿ ನಡೆದ ಏಶಿಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಪಘಾನಿಸ್ತಾನ ವಿರುದ್ಧ 6 ವಿಕೆಟ್ ಗಳಿಂದ ಜಯ ಸಾಧಿಸಿತು.
ಇಲ್ಲಿನ ಶೇಖ ಜಯೀದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ಜಯ ಸಾಧಿಸುವ ಮೂಲಕ ಬಿ. ಗುಂಪಿನ ಸೂಪರ್-4 ತಂಡಗಳ ಇತ್ಯರ್ಥ ಕೂಡ ಆಗಿದ್ದು, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಬಿ, ಗುಂಪಿನಿಂದ ಹಾಗೂ ಎ ಗುಂಪಿನಿಂದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೂಪರ್-4 ಕ್ಕೆ ತಲುಪಿವೆ.
ಸ್ಕೋರ್ ವಿವರ
ಅಪಘಾನಿಸ್ತಾನ 20 ಓವರುಗಳಲ್ಲಿ 8 ವಿಕೆಟ್ ಗೆ 169
ನಬಿ 60 ( 22 ಎಸೆತ, 3 ಬೌಂಡರಿ, 6 ಸಿಕ್ಸರ್), ನುವಾನ್ ತುಷಾರಾ 18 ಕ್ಕೆ 4)
ಶ್ರೀಲಂಕಾ 18.4 ಓವರುಗಳಲ್ಲಿ 4 ವಿಕೆಟ್ ಗೆ 171
ಕುಶಾಲ್ ಮೆಂಡಿಸ್ ಅಜೇಯ 74 ( 52 ಎಸೆತ, 10 ಬೌಂಡರಿ), ಕಮಿಂಡು ಮೆಂಡಿಸ್ 26 ( 13 ಎಸೆತ, 2 ಸಿಕ್ಸರ್)
———————————————————————-ಪಂದ್ಯ ಶ್ರೇಷ್ಠ: ಕುಶಾಲ್ ಮೆಂಡಿಸ್




