———————————–ಇಂದು ಗೆದ್ದ ತಂಡ ಭಾರತ ವಿರುದ್ಧ ಫೈನಲ್ ಆಡಲಿದೆ
ದುಬೈ: ಏಶಿಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಈಗಾಗಲೇ ಫೈನಲ್ ತಲುಪಿದೆ. ಭಾರತ ವಿರುದ್ಧ ಫೈನಲ್ ಆಡುವ ಇನ್ನೊಂದು ತಂಡದ ನಿರ್ಧಾರ ಕೂಡ ಇಂದು ಆಗಲಿದೆ. ಬಾಂಗ್ಲಾ ಹಾಗೂ ಪಾಕಿಸ್ತಾನ ತಂಡಗಳು ಇಂದು ಮತ್ತೊಂದು ಸೂಪರ್ -4 ರ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಇಂದು ಗೆದ್ದ ತಂಡ ಭಾರತ ವಿರುದ್ಧ ಫೈನಲ್ ಆಡಲಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಪಂದ್ಯ ನಡೆಯಲಿದ್ದು, ಶ್ರೀಲಂಕಾ ವಿರುದ್ಧ ಗೆದ್ದ ಪಾಕಿಸ್ತಾನ ತಂಡ ಫೈನಲ್ ಗೆ ಏರುವ ಇರಾದೆಯಿಂದ ಕಣಕ್ಕೆ ಇಳಿಯಲಿದೆ. ಇನ್ನೊಂದೆಡೆ ಬಾಂಗ್ಲಾದೇಶ ಕೂಡ ಉತ್ತಮ ತಂಡವಾಗಿದ್ದು, ಪಾಕಿಸ್ತಾನ ತಂಡಕ್ಕೆ ಪ್ರಬಲ ಪೈಪೋಟಿ ನೀಡುವ ಇರಾದೆಯಲ್ಲಿದೆ.




